ಕರಾವಳಿ ಕಾವಲು ಪಡೆಯಿಂದ ಮತ್ತೆ ಎರಡು ರೆಡಾರ್‌

0
428

ಕರ್ನಾಟಕದ ಕರಾವಳಿಯಲ್ಲಿ ತೀವ್ರ ನಿಗಾ ವಹಿಸಲು ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಉತ್ತರ ಕನ್ನಡದ ಬೇಲೆಕೇರಿಯಲ್ಲಿ ಎರಡು ಹೊಸ ರೆಡಾರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕರಾವಳಿ ಕಾವಲು ಪಡೆ ಕಮಾಂಡರ್‌ ಎಸ್‌.ಎಸ್‌. ದಸಿಲ್‌ ಹೇಳಿದರು.

ಮಂಗಳೂರು: ಕರ್ನಾಟಕದ ಕರಾವಳಿಯಲ್ಲಿ ತೀವ್ರ ನಿಗಾ ವಹಿಸಲು ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಉತ್ತರ ಕನ್ನಡದ ಬೇಲೆಕೇರಿಯಲ್ಲಿ ಎರಡು ಹೊಸ ರೆಡಾರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕರಾವಳಿ ಕಾವಲು ಪಡೆ ಕಮಾಂಡರ್‌ ಎಸ್‌.ಎಸ್‌. ದಸಿಲ್‌ ಹೇಳಿದರು.

ಬೇಲೆಕೇರಿಯಲ್ಲಿ ಈಗಾಗಲೇ ರೆಡಾರ್ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಕುಂದಾಪುರದ ಲೈಟ್‌ ಹೌಸ್‌ನಲ್ಲಿ ರೆಡಾರ್‌ ಸ್ಥಾಪಿಸಲಾಗುತ್ತಿದೆ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಭಟ್ಕಳ ಮತ್ತು ಸುರತ್ಕಲ್‌ನ ಲೈಟ್‌ ಹೌಸ್‌ನಲ್ಲಿ ರೆಡಾರ್‌ ಕೇಂದ್ರಗಳಿದ್ದು, ಸಮುದ್ರದಲ್ಲಿ 60–80 ನಾಟಿಕಲ್‌ ಮೈಲ್‌ ದೂರದವರೆಗಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗಿದೆ. ಸುರತ್ಕಲ್‌ನ ರೆಡಾರ್‌ ಕೇಂದ್ರದಿಂದ ಭಟ್ಕಳದವರೆಗಿನ ಸಮುದ್ರದ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಬಹುದಾಗಿದೆ. ರೆಡಾರ್‌ಗಳಲ್ಲಿ ಗುಣಮಟ್ಟದ ಕ್ಯಾಮೆರಾ ಹೊಂದಿದ್ದು, ಅತ್ಯುತ್ತಮ ಚಿತ್ರಗಳನ್ನು ಸೆರೆ ಹಿಡಿಯಲಾಗುತ್ತಿದೆ ಎಂದರು.