ಕಮಲಾದೇವಿ ಚಟ್ಟೋಪಾಧ್ಯಾಯಗೆ ಗೂಗಲ್‌ ಡೂಡಲ್‌ ಗೌರವ

0
19

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮದಿನದಂದು ಗೂಗಲ್‌ ಡೂಡಲ್‌ ಮೂಲಕ ಗೌರವ ಸಮರ್ಪಿಸಿದೆ.

ವಿದ್ಯಾರ್ಥಿ ದಿಸೆಯಿಂದಲೇ ಚಳವಳಿಯನ್ನು ಮೈಗೂಡಿಸಿಕೊಂಡ ಕಮಲಾದೇವಿ ಮಹಾತ್ಮಾಗಾಂಧಿಯವರ ಅಸಹಕಾರ ಚಳವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಭಾರತೀಯ ಕಲೆ, ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ರಂಗಮಂದಿರಗಳ ಪುನರುಜ್ಜೀವನಕ್ಕೆ ಕಮಲಾದೇವಿ ಸಾಕಷ್ಟು ಹೋರಾಟ ನಡೆಸಿದ್ದರು.

ಲಂಡನ್‌ನಲ್ಲಿ ಸಮಾಜ ಶಾಸ್ತ್ರ ಅಧ್ಯಯನ ನಡೆಸಿ ಬಂದ ನಂತರ ತಮ್ಮ ಅನುಭವ, ಜ್ಞಾನವನ್ನು ಅರ್ಹರ ಏಳಿಗೆಗೆ ವಿನಿಯೋಗಿಸಿದರು.