ಕನ್ನಡತಿ “ಡಾ. ಪ್ರಿಯಾಂಕ ಅಭಿಷೇಕ್”ಗೆ ಮಿಸೆಸ್ ಪ್ಲಾನೆಟ್ 2019 ರ ಕಿರೀಟ

0
23

ಬಲ್ಗೇರಿಯಾದಲ್ಲಿ ನಡೆದ “ಮಿಸಸ್ ಪ್ಲಾನೇಟ್ 2019 “ ಸುಂದರಿಯರ ಸ್ಪರ್ಧೆಯಲ್ಲಿ ಕರ್ನಾಟಕದ ಡಾ. ಪ್ರಿಯಾಂಕ ಅಭಿಷೇಕ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರು: ಬಲ್ಗೇರಿಯಾದಲ್ಲಿ ನಡೆದ “ಮಿಸಸ್ ಪ್ಲಾನೇಟ್ 2019 “ ಸುಂದರಿಯರ ಸ್ಪರ್ಧೆಯಲ್ಲಿ ಕರ್ನಾಟಕದ ಡಾ. ಪ್ರಿಯಾಂಕ ಅಭಿಷೇಕ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಲ್ಗೇರಿಯಾದ ಸೋಫಿಯಾದಲ್ಲಿ ಇರಾನಾ ಪಾಪಝೋವಾ ಸಂಸ್ಥೆ ಈ ತಿಂಗಳಲ್ಲಿ ಆಯೋಜಿಸಿದ್ದ 10ನೇ ಪ್ರತಿಷ್ಠಿತ ಅಂತಾರಾಷ್ಟ್ರೀಯ “ಮಿಸಸ್ ಪ್ಲಾನೇಟ್ 2019 “ ಸುಂದರಿಯರ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಡಾ. ಪ್ರಿಯಾಂಕ ಅಭಿಷೇಕ್ ಆಯ್ಕೆಯಾಗಿ ಜಾಗತಿಕ ಮಟ್ಟದ ಮುಕುಟ ತೊಟ್ಟು ಸಂಭ್ರಮಿಸಿದ್ದಾರೆ.

ಜಗತ್ತಿನಾದ್ಯಂತ ಮದುವೆಯಾದ ಸುಂದರ ಮಹಿಳೆಯರನ್ನು ಒಂದೆಡೆ ಸೇರಿಸುವ, ಇಂತಹ ಮಹಿಳೆಯರು ತನ್ನ ದೇಶದ ಕಲೆ, ಸಂಸ್ಕೃತಿ, ಜೀವನ ಪದ್ಧತಿ, ದೇಶ, ದೇಶಗಳ ನಡುವೆ ಬಾಂಧವ್ಯ ವೃದ್ದಿಸುವ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಉದ್ದೇಶದಿಂದ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 

ಇನ್ನು ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕಿರೀಟ ಧರಿಸಿದ ಮೊದಲ ಕನ್ನಡ ಮಹಿಳೆಯಾಗಿ ಪ್ರಿಯಾಂಕಾ ಗುರುತಿಸಿಕೊಂಡಿದ್ದಾರೆ. ಈ ಹಿಂದೆ “ಮಿಸೆಸ್ ಇಂಡಿಯಾ” ಕಿರೀಟ ಧರಿಸಿದ ನಂತರ ಪ್ರಿಯಾಂಕಾ “ಮಿಸೆಸ್ ಪ್ಲಾನೆಟ್” ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು.  ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಪ್ರಿಯಾಂಕಾ ಪ್ರವೃತ್ತಿಯಲ್ಲಿ ಕಲಾವಿದರಾಗಿದ್ದಾರೆ. ಅಭಿಷೇಕ್ ಅವರನ್ನು ವಿವಾಹವಾಗಿರುವ ಪ್ರಿಯಾಂಕಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.