ಕತ್ತೆಗಳ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ 3ನೇ ಸ್ಥಾನ; 1 ಕತ್ತೆಯಿಂದ ದಿನಕ್ಕೆ 800 ರೂ. ಗಳಿಕೆ…

0
761

ಪಾಕಿಸ್ತಾನ ದಿನದಿಂದ ದಿನಕ್ಕೆ ದಿವಾಳಿಯತ್ತ ಸಾಗುತ್ತಿರುವುದು ಸಧ್ಯದ ವಿಚಾರ. ಭಾರತದ ಗಡಿಯುದ್ದಕ್ಕೂ ಕ್ಯಾತೆ ತೆಗೆಯುತ್ತ, ಉಗ್ರರನ್ನು ನುಸುಳಿ ಬಿಡುವ ಪಾಕಿಸ್ತಾನ ವಿಶ್ವದಲ್ಲಿ ಹೊಸದೊಂದು ದಾಖಸೆ ಸೃಷ್ಟಿಸಿದೆ.

ಪಾಕಿಸ್ತಾನದ ದಿನದಿಂದ ದಿನಕ್ಕೆ ದಿವಾಳಿಯತ್ತ ಸಾಗುತ್ತಿರುವುದು ಸಧ್ಯದ ವಿಚಾರ. ಭಾರತದ ಗಡಿಯುದ್ದಕ್ಕೂ ಕ್ಯಾತೆ ತೆಗೆಯುತ್ತ, ಉಗ್ರರನ್ನು ನುಸುಳಿ ಬಿಡುವ ಪಾಕಿಸ್ತಾನ ವಿಶ್ವದಲ್ಲಿ ಹೊಸದೊಂದು ದಾಖಸೆ ಸೃಷ್ಟಿಸಿದೆ. ಕತ್ತೆಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನದಲ್ಲಿ ಏನಿಲ್ಲವೆಂದರೂ 50 ಲಕ್ಷ ಕತ್ತೆಗಳಿವೆಯಂತೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಜಾನುವಾರು ವಿಭಾಗ ಹೇಳುವ ಪ್ರಕಾರ ಲಾಹೋರ್‌ನಲ್ಲಿಯೇ 41,000ಕ್ಕೂ ಅಧಿಕ ಕತ್ತೆಗಳು ಇವೆ. ಪಂಜಾಬ್‌ ಪ್ರಾಂತ್ಯದ ಜಾನುವಾರು ವೈದ್ಯಕೀಯ ಕೇಂದ್ರಗಳಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇತರ ಪಶುಗಳಿಗೆ ಚಿಕಿತ್ಸೆ ದುರ್ಲಬವಾಗುತ್ತಿದೆ. ಹೆಚ್ಚುಗಾರಿಕೆ ಎಂದರೆ ಕತ್ತೆಗಳಿಗಾಗಿಯೇ ಉಚಿತ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.

ಕತ್ತೆಗಳಿಂದ ಉತ್ತಮ ಆದಾಯ ಲಭ್ಯವಾಗುತ್ತಿರುವುದರಿಂದ ಪಾಕಿಸ್ತಾನ ಸರಕಾರ ಕತ್ತೆಗಳ ಮೇಲೆ ವಿಶೇಷ ಕಾಳಜಿ ತೋರಿಸುತ್ತಿದೆ. ಕತ್ತೆಗಳಿಗೆ ಉತ್ತಮ ಬೆಲೆಯೂ ಇದೆ. ಅಲ್ಲಿ ಒಂದು ಕತ್ತೆಗೆ 35,000 ರೂ. ಇಂದ 50,000 ರೂ. ವರೆಗೆ ಬೆಲೆ ಇದೆಯಂತೆ. ಒಂದು ಕತ್ತೆಯಿಂದ ದಿನಕ್ಕೆ 800 ರೂ. ಆದಾಯ ಬರುತ್ತದೆ ಎನ್ನಲಾಗಿದೆ. ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಚೀನಾ, ಕತ್ತೆಗಳ ಸಂಖ್ಯೆಯಲ್ಲೂ ಅಗ್ರ ಸ್ಥಾನ ಉಳಿಸಿಕೊಂಡಿದೆ. 

ಪ್ರಮುಖಾಂಶಗಳು:-

  • ಕತ್ತೆಗಳ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ 3ನೇ ಸ್ಥಾನ, ಕತ್ತೆಗಳಿಂದ ಭಾರಿ ಆದಾಯ ಗಳಿಸುತ್ತಿರುವ ಪಾಕ್‌.
  • ಪಾಕಿಸ್ತಾನದಲ್ಲಿವೆ ಬರೋಬ್ಬರಿ 50 ಲಕ್ಷ ಕತ್ತೆಗಳು, ದಿನವೊಂದಕ್ಕೆ ಒಂದು ಕತ್ತೆಯಿಂದ 800 ರೂ. ಗಳಿಕೆ.
  • ಲಾಹೋರ್‌ ಪ್ರದೇಶವೊಂದರಲ್ಲೇ 41,000 ಕತ್ತೆಗಳಿವೆ, ಒಂದು ಕತ್ತೆಗೆ 35,000 ಇಂದ 50,000 ರೂ. ಬೆಲೆ.