ಕಣ್ಣೂರಿನಲ್ಲಿ ಕೇರಳದ 4ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

0
702

ಕೇರಳ ರಾಜ್ಯವು ದೇಶದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಖ್ಯಾತಿ ಪಡೆದುಕೊಂಡಿದೆ.

ಕಣ್ಣೂರು (ಪಿಟಿಐ): ಕೇರಳ ರಾಜ್ಯವು ದೇಶದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಖ್ಯಾತಿ ಪಡೆದುಕೊಂಡಿದೆ. 

ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್ ಬಳಿಕ ಇದೀಗ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಲೋಕಾರ್ಪಣೆಗೊಂಡಿದೆ. 

2018 ಡಿಸೆಂಬರ್ 9 ರ ಭಾನುವಾರ ಮೊದಲ ವಿಮಾನ ಹಾರಾಟ ನಡೆಸುವ ಮೂಲಕ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಕ್ಕಿತು. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ತೋರಿಸಿದರು. 186 ಪ್ರಯಾಣಿಕರನ್ನು ಹೊತ್ತು ವಿಮಾನವು ಅಬುಧಾಬಿಗೆ ಪ್ರಯಾಣ ಬೆಳೆಸಿತು.

ರಾಜ್ಯದ ಕನಸಿನ ಯೋಜನೆಗೆ ಬೆಂಬಲ ನೀಡಿದ ಸುರೇಶ್ ಪ್ರಭು ಅವರಿಗೆ ಪಿಣರಾಯಿ ವಿಜಯನ್ ಧನ್ಯವಾದ ಹೇಳಿದರು. ಮಾಜಿ ಮುಖ್ಯಮಂತ್ರಿ ಇ.ಕೆ ನಾಯನಾರ್, ಉದ್ಯಮಿ ಕೃಷ್ಣನ್ ನಾಯರ್ ಅವರ ನೆರವನ್ನೂ ಸ್ಮರಿಸಿದರು. 

ಕಾರ್ಯಕ್ರಮವನ್ನು ಪ್ರತಿಪಕ್ಷ ಯುಡಿಎಫ್ ಹಾಗೂ ಬಿಜೆಪಿ ಬಹಿಷ್ಕರಿಸಿದ್ದವು. ಮಾಜಿ ಮುಖ್ಯಮಂತ್ರಿ ಉ‌ಮ್ಮನ್ ಚಾಂಡಿ ಅವರಿಗೆ ಅಹ್ವಾನ ನೀಡದ್ದಕ್ಕೆ ಯುಡಿಎಫ್ ಮುನಿಸಿಕೊಂಡಿತ್ತು. 

ಕೊಲ್ಲಿಗೆ ಸಂಪರ್ಕ.. ಪ್ರವಾಸೋದ್ಯಮ ಏಳಿಗೆ: ಸರ್ಕಾರಿ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿಮಾನ ನಿಲ್ದಾಣವು ನಿರ್ಮಾಣಗೊಂಡಿದೆ. ದೇಶದಲ್ಲಿ ಒಂದು ವಿಮಾನ ನಿಲ್ದಾಣವನ್ನು ಹೇಗೆ ನಿರ್ಮಿಸಬೇಕು ಎಂಬುದಕ್ಕೆ ಕಣ್ಣೂರಿನ ನಿಲ್ದಾಣವು ಒಂದು ಮಾದರಿ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. 

ಮುಖ್ಯವಾಗಿ ಕೊಲ್ಲಿ ದೇಶಗಳು ಸೇರಿದಂತೆ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೇರಳದ ಜನರಿಗೆ ಇದು ಬಹುವಾಗಿ ನೆರವಾಗಲಿದೆ. ಇದರಾಚೆಗೆ ಪ್ರವಾಸೋದ್ಯಮ ವೃದ್ಧಿ, ಸಾಮಗ್ರಿಗಳ ರಫ್ತು, ಉದ್ಯೋಗ ಸೃಷ್ಟಿ ಹೆಚ್ಚಾಗಲಿವೆ.

ಕಣ್ಣೂರು ವಿಮಾನ ನಿಲ್ದಾಣವು ಕೇರಳ ಹಾಗೂ ಕರ್ನಾಟಕದ ಸಾಂಸ್ಕೃತಿಕ ಚಿತ್ರಣವನ್ನು ಪ್ರಯಾಣಿಕರಿಗೆ ಕಟ್ಟಿಕೊಡಲಿದೆ. 

ಗೋಡೆಗಳ ಮೇಲೆ ಕರ್ನಾಟಕ ಕರಾವಳಿ ಭಾಗದ ಸಾಂಪ್ರದಾಯಿಕ ಕಲೆ ಯಕ್ಷಗಾನ ಪ್ರಸಂಗಗಳನ್ನು ಚಿತ್ರಿಸಲಾಗಿದೆ. ಉತ್ತರ ಕೇರಳದ ತೆಯ್ಯಂ, ಮಲಬಾರ್‌ ಪ್ರದೇಶದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಲಾಗಿದೆ. 

ಕೊಲ್ಲಿಗೆ ಸಂಪರ್ಕ.. ಪ್ರವಾಸೋದ್ಯಮ ಏಳಿಗೆ..

ಸರ್ಕಾರಿ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿಮಾನ ನಿಲ್ದಾಣವು ನಿರ್ಮಾಣಗೊಂಡಿದೆ. ದೇಶದಲ್ಲಿ ಒಂದು ವಿಮಾನ ನಿಲ್ದಾಣವನ್ನು ಹೇಗೆ ನಿರ್ಮಿಸಬೇಕು ಎಂಬುದಕ್ಕೆ ಕಣ್ಣೂರಿನ ನಿಲ್ದಾಣವು ಒಂದು ಮಾದರಿ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. 

ಮುಖ್ಯವಾಗಿ ಕೊಲ್ಲಿ ದೇಶಗಳು ಸೇರಿದಂತೆ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೇರಳದ ಜನರಿಗೆ ಇದು ಬಹುವಾಗಿ ನೆರವಾಗಲಿದೆ. ಇದರಾಚೆಗೆ ಪ್ರವಾಸೋದ್ಯಮ ವೃದ್ಧಿ, ಸಾಮಗ್ರಿಗಳ ರಫ್ತು, ಉದ್ಯೋಗ ಸೃಷ್ಟಿ ಹೆಚ್ಚಾಗಲಿವೆ. 

100 ದೇಶದಾದ್ಯಂತ ಇರುವ ಎಲ್ಲಾ ವಿಮಾಣ ನಿಲ್ದಾಣಗಳು

100 ಇನ್ನು 10–15 ವರ್ಷಗಳಲ್ಲಿ ಕಾರ್ಯಾಚರಣೆ ಆರಂಭಿಸಲಿರುವ ವಿಮಾನ ನಿಲ್ದಾಣಗಳು