‘ಕಂದು ಬಣ್ಣದ ಹೆಮ್ಮೆಯ ಭಾರತೀಯಳು ನಾನು’ : ಮಾಜಿ ವಿಶ್ವ ಸುಂದರಿ “ಡಯಾನಾ ಹೇಡನ್‌”

0
41

‘ನಾನು ಕಂದು ಬಣ್ಣದ ಭಾರತೀಯಳಾಗಿರಲು ಹೆಮ್ಮೆ ಪಡುತ್ತೇನೆ’ ಎಂದು ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್‌ ಹೇಳಿದ್ದಾರೆ.

ನವದೆಹಲಿ : ‘ನಾನು ಕಂದು ಬಣ್ಣದ ಭಾರತೀಯಳಾಗಿರಲು ಹೆಮ್ಮೆ ಪಡುತ್ತೇನೆ’ ಎಂದು ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್‌ ಹೇಳಿದ್ದಾರೆ.

‘ಡಯಾನಾ ಹೇಡನ್‌ ವಿಶ್ವ ಸುಂದರಿ ಎನ್ನುವುದು ಕೇವಲ ಜೋಕ್‌’ ಎಂಬ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ಕುಮಾರ್‌ ದೇವ್‌ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ, ‘ ‘ಸೌಂದರ್ಯದ ಪರಿಕಲ್ಪನೆಯನ್ನು ಬಣ್ಣದ ಮೂಲಕ ಅಳೆಯುವ ಮನಸ್ಥಿತಿ ಕಂಡಾಗ ನೋವಾಗುತ್ತದೆ. ಸಾಧನೆಯನ್ನು ನೋಡಿ ಜನರು ಹೆಮ್ಮೆ ಪಡೆಬೇಕು. ಅದನ್ನು ಟೀಕಿಸುವುದಲ್ಲ’ ಎಂದಿದ್ದಾರೆ.

ವಿಪ್ಲವ್‌ ಅವರ ಟೀಕೆಗೆ ಟ್ವಿಟರ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ‘ಇದೊಂದು ಮೂರ್ಖ ಮತ್ತು ಕೋಮುವಾದಿ ಹೇಳಿಕೆ. 2018ರ ಹಾಸ್ಯಾಸ್ಪದ ಹೇಳಿಕೆಯಿದು. ದೇಶಕ್ಕೆ ಮತ್ತೊಬ್ಬ ಮನೋರಂಜನ ವ್ಯಕ್ತಿ ಸಿಕ್ಕಿದ್ದಾನೆ’ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.  

ತ್ರಿಪುರದ ಅಗರ್ತಲಾದ ಪ್ರಜ್ಞಾ ಭವನದಲ್ಲಿ ಆಯೋಜಿಸಿದ್ದ ಕರಕುಶಲ ವಿನ್ಯಾಸ ಮತ್ತು ಕೈಮಗ್ಗ ಕಾರ್ಯಾಗಾರದಲ್ಲಿ ಮಾತನಾಡಿದ ವಿಪ್ಲವ್‌ಕುಮಾರ್, ‘ನಟಿ ಐಶ್ವರ್ಯಾ ರೈ ಅವರು ಭಾರತದ ಅದ್ಭುತ ಸುಂದರಿ. ದೇವತೆಯರಾದ ಲಕ್ಷ್ಮಿ, ಸರಸ್ವತಿಯಂತೆ ಕಾಣುತ್ತಾರೆ. ದೇಶದ ಮಹಿಳೆಯರನ್ನು ಪ್ರತಿನಿಧಿಸುವ ಹಕ್ಕು ಅವರಿಗಿದೆ. ಆದರೆ ಡಯಾನಾ ಹೇಡನ್‌ ಈ ವರ್ಗಕ್ಕೆ ಸೇರುವುದಿಲ್ಲ. ಅವರ ಆಯ್ಕೆಯ ಮಾನದಂಡವನ್ನು ನನಗೆ ಅರಿಯಲು ಸಾಧ್ಯವಾಗಿಲ್ಲ’ ಎಂದು ಹೇಳಿದ್ದರು.

ನಾನು ಚಿಕ್ಕ ವಯಸ್ಸಿನಿಂದಲೂ ಚರ್ಮದ ಬಣ್ಣದ ಕಾರಣಕ್ಕೆ ಇಂಥ ಮಾತುಗಳನ್ನು ಕೇಳುತ್ತಲೇ ಬಂದಿದ್ದೇನೆ. ಆದರೂ ನಾನು ಗೆದ್ದಿದ್ದೇನೆ ಎಂದಿದ್ದಾರೆ ಡಯಾನಾ