ಒಸಾಮಾ ಬಿನ್​ ಲಾಡೆನ್ ಮಗನ ಸಾವು ದೃಢೀಕರಿಸಿದ ವೈಟ್​ಹೌಸ್​: ಪಾಕ್-ಅಫ್ಘನ್ ಗಡಿಯಲ್ಲಿ ಹಮ್ಜಾ ಹತ್ಯೆ

0
8

ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್​ ಲಾಡೆನ್​ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಖಚಿತಪಡಿಸಿದ್ದಾರೆ.

ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್​ ಲಾಡೆನ್​ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಖಚಿತಪಡಿಸಿದ್ದಾರೆ.

ಅಫ್ಘನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ಪಡೆಗಳು ನಡೆಸಿದ ಕಾಯಾರ್ಚರಣೆಯಲ್ಲಿ ಹಮ್ಜಾ ಮೃತಪಟ್ಟಿದ್ದಾನೆಂದು ಕೇಳಿದ್ದಾರೆ. ಆದರೆ ಕಾರ್ಯಾಚರಣೆ ನಡೆದ ನಿಖರ ದಿನಾಂಕ ಅಥವಾ ಹತ್ಯೆಯಾದ ದಿನವನ್ನು ಸ್ಪಷ್ಟಪಡಿಸಿಲ್ಲ. ಈ ಮೂಲಕ ಹಮ್ಜಾ ಸಾವಿನ ಕುರಿತ ಊಹಾಪೋಹಗಳಿಗೆ ವೈಟ್​​ಹೌಸ್​​ ಅಧಿಕೃತವಾಗಿ ತೆರೆಎಳೆದಿದೆ. 
 
ಹಮ್ಜಾ ಸಾವು ಅಲ್ ಖಾಯಿದಾವನ್ನು ದುರ್ಬಲಗೊಳಿಸಿದೆ. ತಂದೆಯೊಂದಿಗೆ ಹೊಂದಿದ್ದ ಸಾಂಕೇತಿಕ  ಸಂಬಂಧವೂ ಕಡಿತಗೊಂಡಡಂತಾಗಿದೆ. ಹಮ್ಜಾ ಸಾವಿನಿಂದ ಅಲ್​ ಖಾಯಿದಾ ಕಾರ್ಯಾಚರಣೆಗಳಿಗೆ ಬಹುದೊಡ್ಡ ಹೊಡೆತ ಬಿದ್ದಿರುವುದಲ್ಲದೇ ಸಂಘಟನೆಯ ಭವಿಷ್ಯದ ಕಾರ್ಯಾಚರಣೆಗಳಿಗೂ ಅಡ್ಡಿಯುಂಟಾಗಿದೆ. ವಿವಿಧ ಭಯೋತ್ಪಾದನಾ ಸಂಘಟನೆಗಳ ದಾಳಿ ಯೋಜನೆಗಳು ಮತ್ತು ವಿವಿಧ ಗುಂಪುಗಳೊಂದಿಗೆ ವ್ಯವಹರಿಸುವ ಜವಾಬ್ದಾರಿಯನ್ನು ಹಮ್ಜಾ ಹೊಂದಿದ್ದ ಎಂದು ಟ್ರಂಪ್ ಹೇಳಿದ್ದಾರೆ.

ಅಲ್ ಖಾಯಿದಾ ಉಗ್ರ ಸಂಘಟನೆ ನೇತೃತ್ವ ವಹಿಸಿಕೊಂಡಿದ್ದ ಹಮ್ಜಾ ಬಿನ್ ಲಾಡೆನ್ ಅಮೆರಿಕ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾನೆ ಎಂದು ಕೆಲವು ತಿಂಗಳುಗಳಿಂದ ಸಾಕಷ್ಟು ಸುದ್ದಿ ಹರಿದಾಡುತ್ತಿತ್ತು. ಆದರೆ ವೈಟ್​ಹೌಸ್​ ಹಮ್ಜಾ ಸಾವಿನ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನಿಡಿರಲಿಲ್ಲ. –ಏಜೆನ್ಸೀಸ್​