ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಅಹಮದ್‌ ‍ಪುನರಾಯ್ಕೆ

0
537

ಶೇಖ್‌ ಅಹಮದ್‌ ಅಲ್‌ ಫಹಾದ್‌ ಅಲ್‌ ಸಬಾಹ್‌ ಅವರು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಬ್ಯಾಂಕಾಕ್‌, ಥಾಯ್ಲೆಂಡ್‌: ಶೇಖ್‌ ಅಹಮದ್‌ ಅಲ್‌ ಫಹಾದ್‌ ಅಲ್‌ ಸಬಾಹ್‌ ಅವರು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಬ್ಯಾಂಕಾಕ್‌ನಲ್ಲಿ ಮಾರ್ಚ್ 3 ರ  ಭಾನುವಾರ ನಡೆದ ಒಸಿಎ ಮಹಾ ಸಭೆಯಲ್ಲಿ ಶೇಖ್‌ ಅಹಮದ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ನಾಲ್ಕು ವರ್ಷ (2019–2023) ಅಧಿಕಾರದಲ್ಲಿ ರಲಿದ್ದಾರೆ.

ಕುವೈತ್‌ನ ಶೇಖ್‌, 1991ರಲ್ಲಿ ಮೊದಲ ಬಾರಿಗೆ ಒಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದಲೂ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಒಸಿಎ ಯ  ಐದು ವಲಯಗಳ ಉಪಾಧ್ಯಕ್ಷರುಗಳಾದ  ತಿಮೋಥಿ ಪೋಕ್ (ಈಸ್ಟ್ ಏಷ್ಯಾ)  ಚರೌಕ್ ಅರಿರಾ ಚಕ್ರನ್ (ಸೌತ್ ಈಸ್ಟ್ ಏಷ್ಯಾ ತೈಮುರ್‍ ಕುಲಿ ಬಯೇವ್ (ಸೆಂಟ್ರಲ್ ಏಷ್ಯಾ) ಸೈಯದ್ ಆರೀಫ್ ಹಸನ್ (ಸೌತ್ ಏಷ್ಯಾ) ಮತ್ತು ಥಾನಿ ಅಲ್ ಕುವಾರಿ (ವೆಸ್ಟ್ ಏಷ್ಯಾ) ಅವರು ಅಹಮದ್ ಗೆ ಬೆಂಬಲ ಸೂಚಿಸಿದ್ದಾರೆ.
 
ಥಾಯ್ಕೆಂಡ್ ನ ಖುನ್ನಿಂಗ್ ಪತಾಮ ಲೀಸ್ವಾಡ ಟ್ರಕುಲ್ ಮತ್ತು ಚೀನಾದ ಲೀ ಜಿಜೊಂಗ್ ಅವರನ್ನು ಕ್ರಮವಾಗಿ ಒಸಿಎ ಸಾಂಸ್ಕೃತಿಕ ಸಮಿತಿ ಮತ್ತು ನೀತಿ ಆಯೋಗದ ಮುಖ್ಯಸ್ಥರುಗಳನ್ನಾಗಿ  ನೇಮಿಸಲಾಗಿದೆ ಎಂದು ಪ್ರಕಟಿಸಲಾಗಿದೆ.