ಒಮನ್ ಲೇಖಕಿ “ಜೋಕಾ ಅಲ್‌ಹರ್ತಿ”ಗೆ 2019 ರ “ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿ”

0
66

ಒಮನ್‌ನ ಲೇಖಕಿ ಜೋಕಾ ಅಲ್‌ಹರ್ತಿ ಅವರು ಪ್ರತಿಷ್ಠಿತ ‘ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಂಡನ್‌ (ಎಪಿ): ಒಮನ್‌ನ ಲೇಖಕಿ ಜೋಕಾ ಅಲ್‌ಹರ್ತಿ ಅವರು ಪ್ರತಿಷ್ಠಿತ ‘ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರ ‘ಸೆಲೆಸ್ಟಿಯಲ್‌ ಬಾಡೀಸ್‌’ ಎಂಬ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಅರೇಬಿಕ್‌ ಭಾಷೆಯ ಸಾಹಿತಿಯೊಬ್ಬರು ಇದೇ ಮೊದಲ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.

ಜೋಕಾ ಅವರು ತಮ್ಮ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವ ಬ್ರಿಟನ್‌ ಮೂಲದ ಮೆರಿಲಿನ್‌ ಬೂಥ್‌ ಅವರೊಂದಿಗೆ ಬಹುಮಾನದ ಮೊತ್ತ  44 ಲಕ್ಷ (50 ಸಾವಿರ ಪೌಂಡ್) ಹಂಚಿಕೊಳ್ಳಲಿದ್ದಾರೆ. ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಅರೇಬಿಕ್‌ ಸಾಹಿತ್ಯ ಅಧ್ಯಯನ ಮಾಡಿರುವ ಜೋಕಾ ಸದ್ಯ ಮಸ್ಕತ್‌ನ ಸುಲ್ತಾನ್‌ ಕಬೂಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.

‘ಈ ಪ್ರಶಸ್ತಿ ದೊರೆತಿರುವುದು ಅತೀವ ಸಂತಸವನ್ನುಂಟು ಮಾಡಿದೆ’ ಎಂದು 40 ವರ್ಷದ ಜೋಕಾ ಪ್ರತಿಕ್ರಿಯಿಸಿದ್ದಾರೆ.

# ಮೊದಲ ಬಾರಿಗೆ  ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿದ ವರ್ಷ : 2005

# (2005) ಮೊದಲ  ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದವರು : ಅಲ್ಬೇನಿಯಾದ ಇಸ್ಮಾಯಿಲ್ ಹಾಲಿಟ್ ಕದರೆ

॑# 2018 ರ “ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿ” ಪಡೆದದವರು : ಪೊಲ್ಯಾಂಡನ  “ಓಲ್ಗಾ ಟೋಕಾರ್ಕ್ಜುಕ್”