ಒಂದೇ ದಿನದಲ್ಲಿ ಐಟಿಆರ್!

0
570

ಆದಾಯ ತೆರಿಗೆ ಮರು ಪಾವತಿ(ಐಟಿಆರ್) ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಐಟಿ ದಿಗ್ಗಜ ಇನ್ಪೋಸಿಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ನವದೆಹಲಿ: ಆದಾಯ ತೆರಿಗೆ ಮರು ಪಾವತಿ(ಐಟಿಆರ್) ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಐಟಿ ದಿಗ್ಗಜ ಇನ್ಪೋಸಿಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ತೆರಿಗೆದಾರರು ಐಟಿಆರ್ ಪ್ರಕ್ರಿಯೆಯನ್ನು ಕೇಂದ್ರೀಯ ವ್ಯವಸ್ಥೆ ಮೂಲಕ ಆನ್​ಲೈನ್​ನಲ್ಲಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ 4241.97 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಹಿಂದೆ ಜಿಎಸ್​ಟಿಎನ್ ತಂತ್ರಾಂಶವನ್ನು ಕೂಡ ಇನ್ಪೋಸಿಸ್ ಅಭಿವೃದ್ಧಿ ಪಡಿಸಿತ್ತು. ಆದರೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈಗ ಟೆಂಡರ್ ಪ್ರಕ್ರಿಯೆಯಲ್ಲಿ ಸಿಪಿಸಿ 2.0 ಬಿಡ್​ನ್ನು ಕೂಡ ಇನ್ಪೋಸಿಸ್ ಪಡೆದಿದೆ.

ಈ ಯೋಜನೆ ಜಾರಿಯಾದಲ್ಲಿ ಐಟಿಆರ್ ಪ್ರಕ್ರಿಯೆ 63 ದಿನಗಳಿಂದ 1 ದಿನಕ್ಕೆ ಇಳಿಕೆಯಾಗಲಿದೆ. ಈ ಯೋಜನೆ ಪೂರ್ಣಗೊಳಿಸಲು 18 ತಿಂಗಳು ಅವಕಾಶ ನೀಡಲಾಗಿದ್ದು, ಬಳಿಕ 3 ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಏತನ್ಮಧ್ಯೆ ನೂತನ ವ್ಯವಸ್ಥೆ ಜಾರಿ ಬರುವರೆಗೆ ಸಿಪಿಸಿ 1.0ರ ಅಭಿವೃದ್ಧಿಗೆ 1482.44 ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿದೆ.

ಕೇಂದ್ರೀಯ ವಿವಿಗೆ -ಠಿ; 3600 ಕೋಟಿ: ಕರ್ನಾಟಕದ ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿ ಒಟ್ಟು 13 ವಿವಿಗಳ ಮೂಲಸೌಕರ್ಯ ಅಭಿವೃದ್ಧಿಗೆ 3600 ಕೋಟಿ ರೂ. ನೀಡಲು ಕೇಂದ್ರ ಸಂಪುಟ ಸಮ್ಮತಿಸಿದೆ.