ಒಂದು ಭಾರತ ಒಂದು ಕಾರ್ಡ್ ’ಗೆ ಚಾಲನೆ

0
775

ದೇಶಾದ್ಯಂತ ಸಂಚಾರ ವ್ಯವಸ್ಥೆಗೆ ಪಾವತಿ ಮಾಡಬಹುದಾದ ಹಾಗೂ ಶಾಪಿಂಗ್ ಜತೆಗೆ ಹಣ ಪಡೆಯಲು ಕೂಡ ಅನುಕೂಲವಿರುವ ನೂತನ ‘ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್ (ಎನ್​ಸಿಎಂಸಿ)’ಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತಿನಲ್ಲಿ ಚಾಲನೆ ನೀಡಿದ್ದಾರೆ.

ಅಹಮದಾಬಾದ್: ದೇಶಾದ್ಯಂತ ಸಂಚಾರ ವ್ಯವಸ್ಥೆಗೆ ಪಾವತಿ ಮಾಡಬಹುದಾದ ಹಾಗೂ ಶಾಪಿಂಗ್ ಜತೆಗೆ ಹಣ ಪಡೆಯಲು ಕೂಡ ಅನುಕೂಲವಿರುವ ನೂತನ ‘ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್ (ಎನ್​ಸಿಎಂಸಿ)’ಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತಿನಲ್ಲಿ ಚಾಲನೆ ನೀಡಿದ್ದಾರೆ.

ಒನ್ ನೇಷನ್ ಒನ್ ಕಾರ್ಡ್ ಎಂದು ಕರೆಯಲಾಗುವ ಈ ಪಾವತಿ ವ್ಯವಸ್ಥೆ ಶೀಘ್ರ ಜನಪ್ರಿಯತೆ ಗಳಿಸುವ ಸೂಚನೆ ನೀಡಿದೆ. ಮೆಟ್ರೋ ಟಿಕೆಟ್ ಪಡೆಯಲು, ಬಸ್-ರೈಲು ಟಿಕೆಟ್​ಗೆ ಪಾವತಿಸಲು, ಕಾರಿನಲ್ಲಿ ಪ್ರಯಾಣ ವೇಳೆ ಹೆದ್ದಾರಿಯಲ್ಲಿನ ಟೋಲ್ ಪ್ಲಾಜಾಗಳಲ್ಲಿ ಪಾವತಿಗೆ ಮತ್ತು ಶಾಪಿಂಗ್ ಮಾಡಲು ದೇಶಾದ್ಯಂತ ಈ ಒಂದೇ ಕಾರ್ಡ್ ಗ್ರಾಹಕರಿಗೆ ನೆರವಾಗಲಿದೆ. ಬ್ಯಾಂಕ್ ಖಾತೆಗೆ ಜೋಡಣೆ ಮೂಲಕ ಈ ಕಾರ್ಡನ್ನು ಎಟಿಎಂ ಕಾರ್ಡ್​ನಂತೆ ಕೂಡ ಬಳಸಬಹುದಾಗಿದೆ.

ಸಂಪೂರ್ಣ ಸ್ವದೇಶಿ ತಂತ್ರಜ್ಞಾನ: ‘ಸ್ವಾಗತ್’ ಹೆಸರಿನ ಆಟೋಮೆಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಓಪನ್ ಲೂಪ್ ಆಟೋಮೆಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆ ‘ಸ್ವೀಕಾರ್’ ತಂತ್ರಜ್ಞಾನ ಆಧರಿಸಿ ಹೊಸ ಕಾರ್ಡ್ ವ್ಯವಸ್ಥೆ ರೂಪಿಸಲಾಗಿದೆ. ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಕೂಡಿದೆ.

ಕಾರ್ಡ್ ವಿಶೇಷತೆ

  • ಡೆಬಿಟ್, ಕ್ರೆಡಿಟ್, ಪ್ರಿಪೇಯ್ಡ್ ಕಾರ್ಡ್ ಪಡೆಯಬಹುದು.
  • ಬಿಲ್ ಪಾವತಿಗೆ ಕ್ಯಾಷ್​ಬ್ಯಾಕ್ ಸೇರಿ ಹಲವು ಕೊಡುಗೆಗಳು
  • ಎಟಿಎಂಗಳಲ್ಲಿ ಕಾರ್ಡ್ ಬಳಕೆಗೆ ಶೇ.5 ಕ್ಯಾಷ್​ಬ್ಯಾಕ್, ವಿದೇಶಗಳಲ್ಲಿ ಪಾವತಿಗೆ ಶೇ. 10 ಕ್ಯಾಷ್​ಬ್ಯಾಕ್