ಐ.ಸಿ.ಸಿ ನಿಯಮಕ್ಕೆ ವಿರುದ್ದವಾಗಿ ನಡೆದುಕೊಂಡ ಆರೋಪ :ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಸ್ಟುವರ್ಟ್ ಲಾ ಅಮಾನತು

0
264

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ(ಐ.ಸಿ.ಸಿ) ನಿಯಮಕ್ಕೆ ವಿರುದ್ದವಾಗಿ ನಡೆದುಕೊಂಡಿರುವ ಕಾರಣ ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಸ್ಟುವರ್ಟ್ ಲಾ ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ಮುಂಬೈ : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ(ಐ.ಸಿ.ಸಿ) ನಿಯಮಕ್ಕೆ ವಿರುದ್ದವಾಗಿ ನಡೆದುಕೊಂಡಿರುವ ಕಾರಣ ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಸ್ಟುವರ್ಟ್ ಲಾ  ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ಅಮಾನತು ಶಿಕ್ಷೆ ತಕ್ಷಣ ಜಾರಿಯಾಗಿರುವ ಕಾರಣ ಸ್ಟುವರ್ಟ್ ಭಾರತದ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯ್ಗಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಜೊತೆ ಇರುವಂತಿಲ್ಲ.

ಹೈದ್ರಾಬಾದ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ವಿಂಡೀಸ್ ತಂಡದ ಕೀರನ್ ಪೋವೆಲ್ ಔಟಾಗಿದ್ದರು. ಈ ವೇಳೆ ಟಿ.ವಿ ಅಪೈರ್ ಕೊಠಡಿಗೆ ತೆರಳಿದ್ದ ಸ್ಟುವರ್ಟ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ನಾಲ್ಕನೇ ಅಪೈರ್ ಇರುವ ಜಾಗಕ್ಕೆ ತೆರಳಿ ಅವರ ವಿರುದ್ದವೂ ಹರಿಹಾಯ್ದಿದ್ದರು. ಹೀಗಾಗಿ ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಸ್ಟುವರ್ಟ್ ಗೆ ದಂಡವನ್ನು ವಿಧಿಸಿದ್ದಾರೆ.