ಐ.ಎ.ಇ.ಎ ಮಹಾ ನಿರ್ದೇಶಕ “ಯುಕಿಯಾ ಅಮಾನೋ” ನಿಧನ

0
17

ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಮಹಾ ನಿರ್ದೇಶಕ ಯುಕಿಯಾ ಅಮಾನೋ(72) ಜುಲೈ 22 ರ ಸೋಮವಾರ ನಿಧನರಾದರು

ವಿಯೆನ್ನಾ:  ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಮಹಾ ನಿರ್ದೇಶಕ ಯುಕಿಯಾ ಅಮಾನೋ(72) ಜುಲೈ 22 ರ ಸೋಮವಾರ ನಿಧನರಾದರು

ಸಾವಿನ ಕಾರಣವನ್ನು ಸ್ಪಷ್ಟಪಡಿಸಿಲ್ಲ. ಆದರೆ ಹುದ್ದೆಯಿಂದ ಕೆಳಗಿಳಿಯುವ ಕುರಿತು ಆಡಳಿತ ಮಂಡಳಿಗೆ ಈ ಮೊದಲು ಮಾಹಿತಿ ನೀಡಿದ್ದರು. ರಾಜೀನಾಮೆ ಕುರಿತು ಪತ್ರ ಸಿದ್ದಪಡಿಸಿದ್ದರು ಎಂದು ಸಂಸ್ಥೆ ಹೇಳಿದೆ.

ಪತ್ರದ ಕೆಲವು ಅಂಶಗಳನ್ನು ಮಾಧ್ಯಮಗಳಿಗೆ ಬಿಡುಗಡೆಮಾಡಿದೆ. ಶಾಂತಿ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಬಳಕೆ ಕುರಿತು ಸಂಸ್ಥೆ ತಳೆದ ನಿಲುವುಗಳನ್ನು ಅಮಾನೋ ಶ್ಲಾಘಿಸಿದ್ದಾರೆ ಎಂದು ತಿಳಿಸಿದೆ.

ಜಪಾನ್ ರಾಜತಾಂತ್ರಿಕ ತಜ್ಞನರಾಗಿದ್ದ ಅಮಾನೋ 2009 ರಲ್ಲಿ ಐಎಇಎ ಸೇರಿದ್ದರು. ಇದಕ್ಕೂ ಮೊದಲು ಜಪಾನ್ ನ ವಿದೇಶಾಂಗ ಸಚಿವಾಲಯದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 1995, 2000 ಮತ್ತು 2005 ರ ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ(ಎನ್.ಎಸ್.ಜಿ) ಅವರು ಕೊಡುಗೆ ನೀಡಿದ್ದರು. 2007 ರ ಎನ್.ಎಸ್.ಜಿ ಒಪ್ಪಂದ ರಚನಾ ಸಭೆ ಮತ್ತು 2010 ರ ಒಪ್ಪಂದ ಪರಾಮರ್ಶನಾ ಸಭೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.