ಐ.ಎಲ್.ಒ ಕಪ್ಪುಪಟ್ಟಿಗೆ “ಸ್ವಿಡ್ಜರ್ ಲ್ಯಾಂಡ್”

0
20

ಕಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ಸ್ವಿಡ್ಜರ್ ಲ್ಯಾಂಡ್ ವಿಫಲವಾಗಿದೆ. ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಒ) ಹೇಳಿದೆ. ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕರನ್ನು ವಜಾಗೊಳಿಸುತ್ತಿರುವ ಸ್ವಿಡ್ಜರ್ ಲ್ಯಾಂಡ್ ದೇಶವನ್ನು ಜೀನೇವಾದಲ್ಲಿ ಪ್ರಧಾನ ಕಚೇರಿಹೊಂದಿರುವ ಐ.ಎಲ್.ಒ ಕಪ್ಪುಪಟ್ಟಿಗೆ ಸೇರಿಸಿದೆ.

ಜಿನೇವಾ : ಕಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ಸ್ವಿಡ್ಜರ್ ಲ್ಯಾಂಡ್ ವಿಫಲವಾಗಿದೆ. ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಒ) ಹೇಳಿದೆ.

ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕರನ್ನು ವಜಾಗೊಳಿಸುತ್ತಿರುವ ಸ್ವಿಡ್ಜರ್ ಲ್ಯಾಂಡ್ ದೇಶವನ್ನು ಜೀನೇವಾದಲ್ಲಿ ಪ್ರಧಾನ ಕಚೇರಿಹೊಂದಿರುವ ಐ.ಎಲ್.ಒ ಕಪ್ಪುಪಟ್ಟಿಗೆ ಸೇರಿಸಿದೆ.

ಐ.ಎಲ್.ಒ ನಿರ್ಣಯಗಳನ್ನು ಉಲ್ಲಂಘಿಸಿರುವ 40 ರಾಷ್ಟ್ರಗಳನ್ನು ಇದುವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಯೂರೋಪ್ ನ ಗ್ರೀಸ್, ಬೆಲಾರಸ್, ಸ್ವಿಡ್ಜರ್ ಲ್ಯಾಂಡ್ ಇದರಲ್ಲಿ ಸೇರಿವೆ.

ಕಾರ್ಮಿಕ ಹಕ್ಕುಗಳ ಹೋರಾಟದಲ್ಲಿ ಪಾಲ್ಗೊಳ್ಳುವ ಕಾರ್ಮಿಕರನ್ನು ವಜಾಗೊಳಿಸಬಾರದೆಂಬ ಐ.ಎಲ್.ಒ ನಿರ್ಣಯಕ್ಕೆ  ಸ್ವಿಡ್ಜರ್ ಲ್ಯಾಂಡ್  1999 ರಲ್ಲಿಯೇ ಸಹಿ ಹಾಕಿದ್ದರೂ ಇಂತಹ ಅಂತರಾಷ್ಟ್ರೀಯ ಒಪ್ಪಂದಗಳನ್ನು  ಸ್ವಿಡ್ಜರ್ ಲ್ಯಾಂಡ್   ಉಲ್ಲಂಘಿಸುತ್ತಿದೆ ಎಂದು ಆರೋಪಿಸಲಾಗಿದೆ.

ಕಾರ್ಮಿಕ ಸಂಘಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉದ್ಯೋಗಿಗಳ ವಿರುದ್ದದ ಕರ್ತವ್ಯ ಲೋಪ ಸಾಬೀತಾದರೆ ಅಂತಹ ಉದ್ಯೋಗಿಗಳನ್ನು  ಸ್ವಿಡ್ಜರ್ ಲ್ಯಾಂಡ್  ಕಾನೂನಿನಂತೆ 6 ತಿಂಗಳು ವಜಾಗೊಳಿಸಲಾಗುತ್ತಿದೆ.ಆದರೆ  ಸ್ವಿಡ್ಜರ್ ಲ್ಯಾಂಡ್  ನ ವಾದವನ್ನು ಒಪ್ಪಿಕೊಳ್ಳದ ಐ.ಎಲ್.ಒ ಅಸಂಘಟಿತ ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಆರೋಪಿಸಿದೆ.

ಅನೇಕ ಮಾನದಂಡಗಳನ್ನಾಧರಿಸಿ ದೇಶವೊಂದನ್ನು ಕಪ್ಪುಪಟ್ಟಿಗೆ ಸೇತಿಸುವುದೇ ಬೇಡವೇ ಎಂಬುದನ್ನು  ಐ.ಎಲ್.ಒ ಆಯೋಗ ನಿರ್ಧರಿಸುತ್ತದೆ. ಸಮಸ್ಯೆಯ ಸ್ವರೂಪ ಪರಿಸ್ಥಿತಿ, ಗುಣಮಟ್ಟ ಹಾಗೂ ಸರ್ಕಾರದ ಸ್ಪಂದನೆ ಇವುಗಳಲ್ಲಿ ಸೇರಿವೆ.