ಐ.ಎಫ್,ಎಫ್.ಐ : ರಜನಿಕಾಂತ್ ಗೆ ವಿಶೇಷ ಪ್ರಶಸ್ತಿ

0
20

ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ “ಐಕಾನ್ ಆಫ್ ಗೋಲ್ಡನ್ ಜುಬಿಲಿ” ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ನವದೆಹಲಿ:  ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ “ಐಕಾನ್ ಆಫ್ ಗೋಲ್ಡನ್ ಜುಬಿಲಿ” ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಸಮ್ಮೇಳನವು ಗೋವಾದಲ್ಲಿ ಇದೇ ನವೆಂಬರ್ 20 ರಿಂದ 28 ರವರೆಗೆ ನಡೆಯಲಿದೆ. ವಿವಿಧ ದೇಶಗಳ 250 ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ಈ ಸಮ್ಮೇಳನದ ಸಹಭಾಗಿತ್ವ ಹೊಂದಿರುವ ದೇಶವಾಗಿದೆ.

ಸಮ್ಮೇಳನದ ತೀರ್ಪುಗಾರರ ಸಮಿತಿ ಹಿರಿಯ ನಟ ರಜನಿಕಾಂತ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿದೆ. ಇದು ಸಮ್ಮೇಳನದ ಆಕರ್ಷಣೆಯಾಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ನವೆಂಬರ್ 2 ರ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ರಜನಿಕಾಂತ್ ಕೃತಜ್ಞತೆ: ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸುವ ನಿರ್ಧಾರಕ್ಕೆ ನಟ ರಜನಿಕಾಂತ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.