ಐಸಿಸಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಮನು

0
634

ಭಾರತದ ಮನು ಶಾನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸೋಮವಾರ ಅಧಿಕಾರ
ಸ್ವೀಕರಿಸಿದ್ದಾರೆ.

ದುಬೈ (ಪಿಟಿಐ): ಭಾರತದ ಮನು ಶಾನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಸ್ತುತ ಸಿಇಒ ಆಗಿರುವ ಡೇವಿಡ್‌ ರಿಚರ್ಡ್ಸನ್‌ ಅವರ ಒಪ್ಪಂದದ ಅವಧಿ ಈ ವರ್ಷದ ಏಕದಿನ ವಿಶ್ವಕಪ್‌ನ ಬಳಿಕ (ಜುಲೈ) ಕೊನೆಯಾಗಲಿದೆ. ಹೀಗಾಗಿ ಮನು ಅವರನ್ನು ಆರು ತಿಂಗಳು ಮುಂಚಿತವಾಗಿಯೇ ಈ ಹುದ್ದೆಗೆ ನೇಮಿಸಲಾಗಿತ್ತು. ಅವರು ಹಿಂದಿನ ಆರು ವಾರಗಳಿಂದ ರಿಚರ್ಡ್ಸನ್‌ ಜೊತೆ ಕೆಲಸ ಮಾಡುತ್ತಿದ್ದರು.

ಮನು ಅವರು ಇಎಸ್‌ಪಿಎನ್‌ ಸ್ಟಾರ್‌ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.