ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪ್ರಕಟ

0
1029

ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಲ್‌ರೌಂಡರ್‌ ಹರ್ಮನ್‌ಪ್ರೀತ್‌ ಕೌರ್, ಟೂರ್ನಿಯಲ್ಲಿ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನ ಅವರು ಉಪ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

ನವದೆಹಲಿ (ಪಿಟಿಐ):ವಿಶ್ವ ಟ್ವೆಂಟಿ–20 ಟೂರ್ನಿ ನವೆಂಬರ್‌ 9ರಿಂದ 24ರವರೆಗೆ ವೆಸ್ಟ್‌ ಇಂಡೀಸ್‌ನಲ್ಲಿ ಜರುಗಲಿದೆ.

ಕರ್ನಾಟಕದ ಬ್ಯಾಟ್ಸ್‌ವುಮನ್‌ ವೇದಾ ಕೃಷ್ಣಮೂರ್ತಿ, ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ಸೆಪ್ಟೆಂಬರ್ 28 ರ ಶುಕ್ರವಾರ ಪ್ರಕಟಿಸಲಾಗಿರುವ ಭಾರತ ಮಹಿಳಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಆಲ್‌ರೌಂಡರ್‌ ಹರ್ಮನ್‌ಪ್ರೀತ್‌ ಕೌರ್, ಟೂರ್ನಿಯಲ್ಲಿ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ 
ಮಂದಾನ ಅವರು ಉಪ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಹಿರಿಯ ಬ್ಯಾಟ್ಸ್‌ವುಮನ್‌ ಮಿಥಾಲಿ ರಾಜ್‌, ದೀಪ್ತಿ ಶರ್ಮಾ, ಯುವ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ಏಕ್ತಾ ಬಿಷ್ಠ್‌ ಮತ್ತು ಪೂನಂ ಯಾದವ್ ಅವರೂ ತಂಡದಲ್ಲಿದ್ದಾರೆ.

ತಂಡ ಇಂತಿದೆ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಮಿಥಾಲಿ ರಾಜ್‌, ಜೆಮಿಮಾ ರಾಡ್ರಿಗಸ್‌, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನ್ಯಾ ಭಾಟಿಯಾ (ವಿಕೆಟ್‌ ಕೀಪರ್‌), ಪೂನಂ ಯಾದವ್‌, ರಾಧಾ ಯಾದವ್‌, ಅನುಜಾ ಪಾಟೀಲ್‌, ಏಕ್ತಾ ಬಿಷ್ಠ್‌, ಡಿ.ಹೇಮಲತಾ, ಮಾನಸಿ ಜೋಷಿ, ಪೂಜಾ ವಸ್ತ್ರಕರ್‌ ಮತ್ತು ಅರುಂಧತಿ ರೆಡ್ಡಿ.

ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು ಇವುಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಭಾರತ ತಂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನ ಮತ್ತು ಐರ್ಲೆಂಡ್‌ಗಳ ಜೊತೆ ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ.

ನವೆಂಬರ್‌ರಂದು ಗಯಾನದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ಬಳಗ ನ್ಯೂಜಿಲೆಂಡ್‌ ಎದುರು ಸೆಣಸಲಿದೆ. ನವೆಂಬರ್‌ 11ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೋರಾ ಡಲಿದೆ. ಬಳಿಕ ಐರ್ಲೆಂಡ್‌ (ನ.15) ಮತ್ತು ಆಸ್ಟ್ರೇಲಿಯಾ (ನ.17) ಎದುರು ಪೈಪೋಟಿ ನಡೆಸಲಿದೆ.