ಐಸಿಸಿ ವಿಶ್ವಕಪ್ ಇಲೆವೆನ್ ತಂಡದಲ್ಲಿ ರೋಹಿತ್, ಬುಮ್ರಾ

0
44

ಭಾರತದ ರೋಹಿತ್ ಶರ್ಮ ಮತ್ತು ಜಸ್​ಪ್ರೀತ್ ಬುಮ್ರಾ ಐಸಿಸಿ ಹೆಸರಿಸಿರುವ ವಿಶ್ವಕಪ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸಾರಥ್ಯದ ತಂಡದಲ್ಲಿ ಚಾಂಪಿಯನ್ ಇಂಗ್ಲೆಂಡ್ ತಂಡದಿಂದ ಅತ್ಯಧಿಕ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.

ಲಂಡನ್: ಭಾರತದ ರೋಹಿತ್ ಶರ್ಮ ಮತ್ತು ಜಸ್​ಪ್ರೀತ್ ಬುಮ್ರಾ ಐಸಿಸಿ ಹೆಸರಿಸಿರುವ ವಿಶ್ವಕಪ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸಾರಥ್ಯದ ತಂಡದಲ್ಲಿ ಚಾಂಪಿಯನ್ ಇಂಗ್ಲೆಂಡ್ ತಂಡದಿಂದ ಅತ್ಯಧಿಕ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.

ನ್ಯೂಜಿಲೆಂಡ್​ನ ಮೂವರು ಮತ್ತು ಆಸ್ಟ್ರೇಲಿಯಾ, ಭಾರತದ ತಲಾ ಇಬ್ಬರು ಆಟಗಾರರಿದ್ದಾರೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ ತಂಡಗಳ ಯಾವುದೇ ಆಟಗಾರರು ಸ್ಥಾನ ಪಡೆದಿಲ್ಲ. ಅಲ್ಲದೆ ಆಲ್ರೌಂಡರ್ ಶಕೀಬ್ ಅಲ್ ಹಸನ್ ಹೊರತಾಗಿ ತಂಡದಲ್ಲಿ ಬೇರಾರೂ ಸ್ಪಿನ್ನರ್​ಗಳಿಲ್ಲ.

ಐಸಿಸಿ ವಿಶ್ವಕಪ್ ಇಲೆವೆನ್ (ಬ್ಯಾಟಿಂಗ್ ಕ್ರಮಾಂಕ ಪ್ರಕಾರ): ರೋಹಿತ್ ಶರ್ಮ, ಜೇಸನ್ ರಾಯ್, ಕೇನ್ ವಿಲಿಯಮ್ಸನ್ (ನಾಯಕ), ಜೋ ರೂಟ್, ಶಕೀಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಜೋಫ್ರಾ ಆರ್ಚರ್, ಲಾಕಿ ಫರ್ಗ್ಯುಸನ್, ಜಸ್​ಪ್ರೀತ್ ಬುಮ್ರಾ. 12ನೇ ಆಟಗಾರ: ಟ್ರೆಂಟ್ ಬೌಲ್ಟ್.

ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ, ಬುಮ್ರಾ

ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್​ಪ್ರೀತ್ ಬುಮ್ರಾ ಐಸಿಸಿ ಏಕದಿನ ಬ್ಯಾಟಿಂಗ್-ಬೌಲಿಂಗ್  ರ‍್ಯಾಂಕಿಂಗ್ ​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ವಿಶ್ವಕಪ್​ನಲ್ಲಿ ಮಿಂಚಿ ದರೂ, ಸೆಮೀಸ್ ವೈಫಲ್ಯದಿಂದಾಗಿ ಬ್ಯಾಟಿಂಗ್  ರ‍್ಯಾಂಕಿಂಗ್ ​ನಲ್ಲಿ 2ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಸೆಮೀಸ್, ಫೈನಲ್​ನಲ್ಲಿ ಮಿಂಚಿದ ಇಂಗ್ಲೆಂಡ್, ಆಟಗಾರರು ಪ್ರಗತಿ ಕಂಡಿದ್ದಾರೆ. ಶಕೀಬ್ ಆಲ್ರೌಂಡರ್ ರ‍್ಯಾಂಕಿಂಗ್ ​ನಲ್ಲಿ  ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಇಂಗ್ಲೆಂಡ್ ವಿಶ್ವಕಪ್ ಗೆಲುವಿನೊಂದಿಗೆ ತಂಡ ರ‍್ಯಾಂಕಿಂಗ್ ​ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಭಾರತ 2ನೇ ಸ್ಥಾನದಲ್ಲಿದೆ.