ಐಸಿಸಿ ರ‍್ಯಾಂಕಿಂಗ್; ಇಂಗ್ಲೆಂಡ್ ಅಗ್ರ, ಕೊಹ್ಲಿ ಜೀವನಶ್ರೇಷ್ಠ

0
16

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿರುವ ಇಂಗ್ಲೆಂಡ್, ದ್ವಿತೀಯ ಸ್ಥಾನದಲ್ಲಿರುವ ಭಾರತ ಜತೆಗಿನ ಅಂತರವನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ.

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿರುವ ಇಂಗ್ಲೆಂಡ್, ದ್ವಿತೀಯ ಸ್ಥಾನದಲ್ಲಿರುವ ಭಾರತ ಜತೆಗಿನ ಅಂತರವನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ. 

ಇನ್ನೊಂದೆಡೆ ಏಕದಿನ ಸರಣಿ ಸೋಲಿನ ಹೊರತಾಗಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಕಪ್ತಾನ  ವಿರಾಟ್ ಕೊಹ್ಲಿ , ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು, ಜೀವನಶ್ರೇಷ್ಠ 911 ರೇಟಿಂಗ್ ಅಂಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. 

ಇದು ಏಕದಿನ ರ‍್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್ ಓರ್ವ ಗಿಟ್ಟಿಸಿಕೊಂಡಿರುವ ಆರನೇ ಶ್ರೇಷ್ಠ ರೇಟಿಂಗ್ ಅಂಕವಾಗಿದೆ. ಏಕದಿನ ಸರಣಿಯಲ್ಲಿ ಕೊಹ್ಲಿ ಅನುಕ್ರಮವಾಗಿ 75, 45 ಹಾಗೂ 71 ರನ್ ಗಳಿಸುವ ಮೂಲಕ ಎರಡು ರೇಟಿಂಗ್ ಅಂಕಗಳ ಬಡ್ತಿ ಪಡೆದಿದ್ದರು. 

ಅಂತೆಯೇ ಇಂಗ್ಲೆಂಡ್ ನೆಲದಲ್ಲಿ ಐದು ವಿಕೆಟುಗಳ ಸಾಧನೆ ಮಾಡಿರುವ ಕುಲ್‌ದೀಪ್ ಯಾದವ್ ಇದೇ ಮೊದಲ ಬಾರಿಗೆ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ. ಸರಣಿಯಲ್ಲಿ ಜೀವನಶ್ರೇಷ್ಠ 25/6 ಸೇರಿದಂತೆ ಒಟ್ಟು ಒಂಬತ್ತು ವಿಕೆಟುಗಳನ್ನು ಕಬಳಿಸಿರುವ ಕುಲ್‌ದೀಪ್, ಎಂಟು ಸ್ಥಾನಗಳ ನೆಗೆತ ಕಂಡು 6ನೇ ಸ್ಧಾನಕ್ಕೆ ತಲುಪಿದ್ದಾರೆ. 

ಇನ್ನು ಸತತ ಎರಡು ಶತಕಗಳನ್ನು ಬಾರಿಸಿರುವ ಇಂಗ್ಲೆಂಡ್‌ನ ಜೋ ರೂಟ್ ಎರಡನೇ ಸ್ಥಾನಕ್ಕೆ ನೆಗೆದಿದ್ದಾರೆ. ಹಾಗೆಯೇ ಜೇಸನ್ ರಾಯ್ ಹಾಗೂ ಇಯಾನ್ ಮಾರ್ಗನ್ ಸಹ ಅನುಕ್ರಮವಾಗಿ 19 ಹಾಗೂ 22ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸ್ಪಿನ್ನರ್ ಆದಿಲ್ ರಶೀದ್ ಸಹ ಏರಿಕೆ ಕಂಡಿದ್ದಾರೆ. 

ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ 127 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ಭಾರತದ (121) ಜತೆಗಿನ ಅಂತರವನ್ನು ಆರು ಅಂಕಗಳಿಗೆ ವೃದ್ಧಿಸಿದೆ.

ಟಾಪ್ 10: 

ಏಕದಿನ ತಂಡ ರ‍್ಯಾಂಕಿಂಗ್ ಪಟ್ಟಿ: 
1). ಇಂಗ್ಲೆಂಡ್ (127) 
2). ಭಾರತ (121) 
3). ದ.ಆಫ್ರಿಕಾ (113) 
4). ನ್ಯೂಜಿಲೆಂಡ್ (112) 
5). ಪಾಕಿಸ್ತಾನ (103) 
6). ಆಸ್ಟ್ರೇಲಿಯಾ (100) 
7). ಬಾಂಗ್ಲಾದೇಶ (93) 
8). ಶ್ರೀಲಂಕಾ (77) 
9). ವೆಸ್ಟ್‌ಇಂಡೀಸ್ (69) 
10). ಅಫಘಾನಿಸ್ತಾನ (63) 

ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ: 
1). ವಿರಾಟ್ ಕೊಹ್ಲಿ (911) 
2). ಜೋ ರೂಟ್ (818) 
3). ಬಾಬರ್ ಅಜಾಮ್ (808) 
4). ರೋಹಿತ್ ಶರ್ಮಾ (806) 
5). ಡೇವಿಡ್ ವಾರ್ನರ್ (803) 
6). ರೋಸ್ ಟೇಲರ್ (785) 
7). ಕ್ವಿಂಟನ್ ಡಿ ಕಾಕ್ (783) 
8). ಫಾಪ್ ಡು ಪ್ಲೆಸಿಸ್ (782) 
9). ಕೇನ್ ವಿಲಿಯಮ್ಸನ್ (778) 
10). ಶಿಖರ್ ಧವನ್ (770) 

ಏಕದಿನ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿ: 
1). ಜಸ್ಪ್ರೀತ್ ಬುಮ್ರಾ (775) 
2). ರಶೀದ್ ಖಾನ್ (763) 
3). ಹಸನ್ ಅಲಿ (750) 
4). ಟ್ರೆಂಟ್ ಬೌಲ್ಟ್ (699) 
5). ಜೋಶ್ ಹೇಜಲ್‌ವುಡ್ (696) 
6). ಕುಲ್‌ದೀಪ್ ಯಾದವ್ (684) 
7). ಇಮ್ರಾನ್ ತಾಹೀರ್ (683) 
8). ಆದಿಲ್ ರಶೀದ್ (681) 
9). ಕಗಿಸೋ ರಬಾಡ (679) 
10). ಯುಜ್ವೇಂದ್ರ ಚಹಲ್ (666)