ಐಸಿಸಿ ಮಹಿಳಾ ಟ್ವೆಂಟಿ–20 ಬೌಲರ್‌ಗಳ ರ‍್ಯಾಂಕಿಂಗ್‌ :ಎರಡನೇ ಸ್ಥಾನ ಕಾಯ್ದುಕೊಂಡ ಪೂನಮ್ ಯಾದವ್

0
308

ಭಾರತದ ಲೆಗ್‌ ಸ್ಪಿನ್ನರ್‌ ಪೂನಮ್ ಯಾದವ್‌, ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿರುವ ಮಹಿಳಾ ಟ್ವೆಂಟಿ–20 ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ.

ದುಬೈ (ಪಿಟಿಐ): ಭಾರತದ ಲೆಗ್‌ ಸ್ಪಿನ್ನರ್‌ ಪೂನಮ್ ಯಾದವ್‌, ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿರುವ ಮಹಿಳಾ ಟ್ವೆಂಟಿ–20 ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ.

ಪೂನಮ್‌ ಅವರ ಖಾತೆಯಲ್ಲಿ 710 ಪಾಯಿಂಟ್ಸ್‌ ಇವೆ. 796 ಪಾಯಿಂಟ್ಸ್‌ ಹೊಂದಿರುವ ಆಸ್ಟ್ರೇಲಿಯಾದ ಮೇಗನ್‌ ಶುಟ್‌ ಅಗ್ರಸ್ಥಾನದಲ್ಲಿದ್ದಾರೆ.

ಎಡಗೈ ಸ್ಪಿನ್ನರ್‌ ರಾಧಾ ಯಾದವ್‌, ದಕ್ಷಿಣ ಆಫ್ರಿಕಾದ ಶಭ್ನಿಮ್‌ ಇಸ್ಮಾಯಿಲ್‌ ಜೊತೆ ಜಂಟಿಯಾಗಿ ಐದನೇ ಸ್ಥಾನದಲ್ಲಿದ್ದಾರೆ. ಇಬ್ಬರೂ 681 ಸ್ಕೋರ್‌ ಕಲೆಹಾಕಿದ್ದಾರೆ.

ಟ್ವೆಂಟಿ–20 ಬ್ಯಾಟ್ಸ್‌ವುಮನ್‌ಗಳ ಪಟ್ಟಿಯಲ್ಲಿ ಭಾರತದ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು 689 ಪಾಯಿಂಟ್ಸ್‌ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್‌ (767) ಮತ್ತು ವೆಸ್ಟ್‌ ಇಂಡೀಸ್‌ನ ಡಿಯಾಂಡ್ರ ದೊತ್ತಿನ್‌ (725)   ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಜೆಮಿಮಾ ರಾಡ್ರಿಗಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಅವರು ಕ್ರಮವಾಗಿ ಆರು ಮತ್ತು ಹತ್ತನೇ ಸ್ಥಾನದಲ್ಲಿ ಇದ್ದಾರೆ.

ತಂಡಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯಾ ಅಗ್ರಸ್ಥಾನ ಹೊಂದಿದ್ದು, ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿದೆ.