ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ‍್ಯಾಂಕಿಂಗ್ : ಅಗ್ರಸ್ಥಾನ ಕಾಯ್ದುಕೊಂಡ “ಕೊಹ್ಲಿ”

0
541

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮುಕ್ತಾಯಗೊಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-4ರ ಅಂತರದಲ್ಲಿ ಹೀನಾಯ ಸರಣಿ ಸೋಲಿಗೆ ಗುರಿಯಾಗಿತ್ತು. ಆದರೆ ವೈಯಕ್ತಿಕವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್, ಎರಡು ಶತಕಗಳು ಸೇರಿದಂತೆ 59.3ರ ಸರಾಸರಿಯಲ್ಲಿ ಒಟ್ಟು 593 ರನ್ ಕಲೆ ಹಾಕಿದ್ದರು. 

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಒಂದು ವರ್ಷದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರಿಗಿಂತಲೂ 29 ಅಂಕ ಹಿನ್ನಡೆಯೊಂದಿಗೆ ಸರಣಿ ಆರಂಭಿಸಿರುವ ಕೊಹ್ಲಿ, ಜೀವನಶ್ರೇಷ್ಠ ದಾಖಲೆಯ ರೇಟಿಂಗ್ ಪಡೆದು ಒಟ್ಟು  937 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ.  

ಭಾರತ ಕೆಎಲ್ ರಾಹುಲ್ 16 ಸ್ಥಾನಗಳ ನೆಗೆತ ಕಂಡು 19ನೇ ಹಾಗೂ  ರಿಷಭ್ ಪಂತ್  63 ಸ್ಥಾನಗಳ ಬಡ್ತಿ ಪಡೆದು 111ನೇ ಸ್ಥಾನಕ್ಕೆ ತಲುಪಿದ್ದಾರೆ.