ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್; 5ನೇ ಸ್ಥಾನ ಕಾಯ್ದುಕೊಂಡ ಭಾರತ

0
15

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟ್ವೆಂಟಿ-20 ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ಭಾರತದ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿರುವ ಆಸ್ಟ್ರೇಲಿಯಾ ಒಂದು ಸ್ಥಾನ ಬಡ್ತಿ ಪಡೆದು ಆರನೇ ಸ್ಥಾನಕ್ಕೆ ನೆಗೆದಿದೆ.

ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೆ ಗುವಾಹಣಿ ಪಂದ್ಯದಲ್ಲಿ ಹೀನಾಯ ಸೋಲಿಗೊಳಾಗಿತ್ತು. ಬಳಿಕ ಹೈದರಾಬಾದ್ ಪಂದ್ಯ ತೇವಯುಕ್ತ ಮೈದಾನದಿಂದಾಗಿ ರದ್ದುಗೊಳಿಸಲಾಗಿತ್ತು.

ಟ್ವೆಂಟಿ-20 ರ‍್ಯಾಂಕಿಂಗ್ ಪಟ್ಟಿಯನ್ನು ನ್ಯೂಜಿಲೆಂಡ್ ಮುನ್ನಡೆಸುತ್ತಿದ್ದು, ಪಾಕಿಸ್ತಾನ ದ್ವಿತೀಯ ಸ್ಥಾನದಲ್ಲಿದೆ. ಅಂತೆಯೇ ಮೂರು ಹಾಗೂ ನಾಲ್ಕನೇ ಸ್ಥಾನಗಳ್ನು ವೆಸ್ಟ್ಇಂಡೀಸ್ ಮತ್ತು ಇಂಗ್ಲೆಂಡ್ ಹಂಚಿಕೊಂಡಿದೆ.

ಅಂದ ಹಾಗೆ ಟಿ-20 ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು 811 ಅಂಕಗಳೊಂದಿಗೆ ಭಾರತ ನಾಯಕ ವಿರಾಟ್ ಕೋಹ್ಲಿ ಮುನ್ನಡೆಸುತ್ತಿದ್ದಾರೆ. ಹಾಗೆಯೇ ಟಿ-20 ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯನ್ನು ಪಾಕಿಸ್ತಾನದ ಇಮಾದ್ ವಾಸೀಂ ಮುನ್ನಡೆಸುತ್ತಿದ್ದಾರೆ.

ಐಸಿಸಿ ಟಿ-20 ರ‍್ಯಾಂಕಿಂಗ್ ಇಂತಿದೆ:-

1. ನ್ಯೂಜಿಲೆಂಡ್ – 125
2. ಪಾಕಿಸ್ತಾನ – 121
3. ವೆಸ್ಟ್‌ಇಂಡೀಸ್ – 120
4. ಇಂಗ್ಲೆಂಡ್ – 119
5. ಭಾರತ – 116
6. ಆಸ್ಟ್ರೇಲಿಯಾ – 111
7. ದ.ಆಫ್ರಿಕಾ – 110
8. ಶ್ರೀಲಂಕಾ – 93
9. ಅಪಘಾನಿಸ್ತಾನ – 86
10. ಬಾಂಗ್ಲಾದೇಶ – 78