ಐಸಿಸಿ ಟಿ20 ರ‌್ಯಾಂಕಿಂಗ್ 6ಕ್ಕೇರಿದ ರಾಹುಲ್

0
485

ವಿವಾದ ಮತ್ತು ರನ್‌ಬರದಿಂದ ಹೊರಬಂದು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದ ಕನ್ನಡಿಗ ಕೆಎಲ್ ರಾಹುಲ್ ಐಸಿಸಿ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 4 ಸ್ಥಾನ ಬಡ್ತಿ ಪಡೆದಿದ್ದಾರೆ. ಈ ಮೂಲಕ 6ನೇ ಸ್ಥಾನಕ್ಕೇರಿರುವ ಅವರು ಅಗ್ರ 10ರೊಳಗಿರುವ ಏಕೈಕ ಭಾರತೀಯರೆನಿಸಿದ್ದಾರೆ.

ದುಬೈ: ವಿವಾದ ಮತ್ತು ರನ್‌ಬರದಿಂದ ಹೊರಬಂದು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದ ಕನ್ನಡಿಗ ಕೆಎಲ್ ರಾಹುಲ್ ಐಸಿಸಿ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 4 ಸ್ಥಾನ ಬಡ್ತಿ ಪಡೆದಿದ್ದಾರೆ. ಈ ಮೂಲಕ 6ನೇ ಸ್ಥಾನಕ್ಕೇರಿರುವ ಅವರು ಅಗ್ರ 10ರೊಳಗಿರುವ ಏಕೈಕ ಭಾರತೀಯರೆನಿಸಿದ್ದಾರೆ.

ಮಾಜಿ ನಂ. 1 ಟಿ20 ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2 ಸ್ಥಾನ ಮೇಲೇರಿ 17ನೇ ಸ್ಥಾನ ಪಡೆದಿದ್ದರೆ, ಧೋನಿ 7 ಸ್ಥಾನ ಪ್ರಗತಿ ಸಾಧಿಸಿ 56ನೇ ಸ್ಥಾನ ಗಳಿಸಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಅಬ್ಬರಿಸಿದ ಅ್ಘಾನಿಸ್ತಾನದ ಆರಂಭಿಕ ಹಜ್ರಾತುಲ್ಲಾ ಜಜಾಯಿ ಬರೋಬ್ಬರಿ 31 ಸ್ಥಾನ ಮೇಲೇರಿ ಜೀವನಶ್ರೇಷ್ಠ 7ನೇ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಟಿ20ಯಲ್ಲಿ ಸ್ಫೋಟಕ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್ ವೆಲ್ 2 ಸ್ಥಾನ ಮೇಲೇರಿ 3ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ 12 ಸ್ಥಾನ ಮೇಲೇರಿ 15ನೇ ಸ್ಥಾನ ಪಡೆದಿದ್ದರೆ, ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕುಲದೀಪ್ ಯಾದವ್ 2 ಸ್ಥಾನ ಕುಸಿದು 4ನೇ ಸ್ಥಾನಕ್ಕಿಳಿದಿದ್ದಾರೆ. ಆದರೂ ಕುಲದೀಪ್ ಭಾರತದ ಅಗ್ರ ಶ್ರೇಯಾಂಕಿತ ಟಿ20 ಬೌಲರ್ ಆಗಿ ಮುಂದುವರಿದಿದ್ದಾರೆ. -ಪಿಟಿಐ

2ನೇ ಸ್ಥಾನಕಾಯ್ದುಕೊಂಡ ಭಾರತ
ಸರಣಿ ಸೋಲಿನಿಂದ 2 ಅಂಕ ನಷ್ಟ ಅನುಭವಿಸಿದರೂ ಭಾರತ ತಂಡ ಟಿ20 ತಂಡ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದರೆ, ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ (118ಅಂಕ) ಮತ್ತು ಇಂಗ್ಲೆಂಡ್ (118) ತಂಡಗಳನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಪಾಕಿಸ್ತಾನ 135 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ (122) ಅದಕ್ಕಿಂತ 13 ಅಂಕ ಹಿಂದಿದೆ. ಆಸೀಸ್ (120) ಇನ್ನೂ 2 ಅಂಕ ಹಿಂದಿದೆ.