ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವ ಕ್ರಮಾಂಕ : ಅಗ್ರಪಟ್ಟ ಉಳಿಸಿಕೊಂಡ ಜಸ್‌ಪ್ರೀತ್‌ ಬೂಮ್ರಾ

0
14

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ನವೆಂಬರ್ 12 ರ ಮಂಗಳವಾರ ಐಸಿಸಿ ಪ್ರಕಟಿಸಿರುವ ಏಕದಿನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳ ವಿಭಾಗಗಳಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ದುಬೈ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು  ನವೆಂಬರ್ 12 ರ   ಮಂಗಳವಾರ ಐಸಿಸಿ ಪ್ರಕಟಿಸಿರುವ ಏಕದಿನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳ ವಿಭಾಗಗಳಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ವಿರಾಟ್‌ ಅವರು ಒಟ್ಟು 895 ಪಾಯಿಂಟ್ಸ್‌ ಗಳಿಸಿದ್ದಾರೆ. ಭಾರತ ತಂಡದ ಉಪ ನಾಯಕ ರೋಹಿತ್‌ ಶರ್ಮಾ (863 ಪಾಯಿಂಟ್ಸ್‌) ಎರಡನೇ ಸ್ಥಾನದಲ್ಲಿದ್ದಾರೆ.

ಬಲಗೈ ವೇಗದ ಬೌಲರ್‌ ಬೂಮ್ರಾ, ಗಾಯದ ಕಾರಣ ಹಿಂದಿನ ಕೆಲ ಸರಣಿಗಳಲ್ಲಿ ಆಡಿರಲಿಲ್ಲ. ಹೀಗಿದ್ದರೂ ಅವರ ರ‍್ಯಾಂಕಿಂಗ್‌ ಪಾಯಿಂಟ್ಸ್‌ (797) ಕಡಿಮೆಯಾಗಿಲ್ಲ. ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ (740) ಎರಡನೇ ಸ್ಥಾನದಲ್ಲಿದ್ದಾರೆ.  

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್‌ ಪಾಂಡ್ಯ ಹತ್ತನೇ ಸ್ಥಾನ ಪಡೆದಿದ್ದಾರೆ. ಅವರ ಖಾತೆಯಲ್ಲಿ 246 ಪಾಯಿಂಟ್ಸ್‌ ಇವೆ. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ (319) ಅಗ್ರಸ್ಥಾನದಲ್ಲಿದ್ದು, ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿ (307) ನಂತರದ ಸ್ಥಾನ ಹೊಂದಿದ್ದಾರೆ.