ಐಸಿಸಿ ಏಕದಿನ ಆಲ್ ರೌಂಡರ್ ರ‍್ಯಾಂಕಿಂಗ್‌ : ಅಗ್ರ ಸ್ಥಾನಕ್ಕೇರಿದ ಬಾಂಗ್ಲಾದೇಶದ ​​​​​​”ಶಕೀಬ್​​​​ ಆಲ್​ ಹಸನ್”

0
22

ಬಾಂಗ್ಲಾದೇಶ ತಂಡದ ಆಲ್ ರೌಂಡರ್​​​​​​ ಶಕೀಬ್​​​​ ಆಲ್​ ಹಸನ್​​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​​ ಮಂಡಳಿ (ಐಸಿಸಿ) ಏಕದಿನ ಆಲ್ ರೌಂಡರ್​​ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ದುಬೈ: ಬಾಂಗ್ಲಾದೇಶ ತಂಡದ ಆಲ್ ರೌಂಡರ್​​​​​​ ಶಕೀಬ್​​​​ ಆಲ್​ ಹಸನ್​​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​​ ಮಂಡಳಿ (ಐಸಿಸಿ) ಏಕದಿನ ಆಲ್ ರೌಂಡರ್​​ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಇತ್ತೀಚಿಗೆ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಶಕೀಬ್​​​​ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಮೂರು ಪಂದ್ಯಗಳಲ್ಲಿ ಅವರು ಎರಡು ಅರ್ಧ ಶತಕಗಳೊಂದಿಗೆ 140 ರನ್​​​ ಗಳಿಸುವ ಮೂಲಕ ಎರಡು ವಿಕೆಟ್​​ ಪಡೆದುಕೊಂಡಿದ್ದಾರೆ.

ಶಕೀಬ್​​ ಅವರ ಉತ್ತಮ ಪ್ರದರ್ಶನದ ಮೂಲಕ 359 ಅಂಕಗಳನ್ನು ಪಡೆದು ಐಸಿಸಿ ಏಕದಿನ ಆಲ್ ರೌಂಡರ್​​​​​​​​ನ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಅಪಘಾನಿಸ್ತಾನದ ರಶೀದ್​​ ಖಾನ್​​​​​​ ಎರಡನೇ ಸ್ಥಾನ ಹಾಗೂ ಮೊಹಮ್ಮದ್​​ ನಬೀ ಮೂರನೇ ಸ್ಥಾನದಲ್ಲಿದ್ದಾರೆ.

ಶಕೀಬ್​​ 2019ನೇ ಇಂಡಿಯನ್​​ ಪ್ರೀಮಿಯರ್​​ ಲೀಗ್​​ನ ಸನ್​ರೈಸರ್ಸ್​ ಹೈದರಾಬಾದ್​​ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗಾಗಲೇ ಅವರು ವಿಶ್ವಕಪ್​​ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದು, ಉತ್ತಮ ಆಟವಾಡುವ ವಿಶ್ವಾಸದಲ್ಲಿದ್ದಾರೆ. 

 # (ಐಸಿಸಿ) ಏಕದಿನ ಬ್ಯಾಟ್ಸ್ ಮನ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ : ವಿರಾಟ್ ಕೊಹ್ಲಿ(ಭಾರತ)

 # (ಐಸಿಸಿ) ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ : ಜಸಪ್ರೀತ್ ಬೂಮ್ರಾ (ಭಾರತ)