ಭಾರತದ ಪಂಕಜ್ ಅಡ್ವಾಣಿ ಸತತ ಮೂರನೇ ಬಾರಿ ಐಬಿಎಸ್ಎಫ್ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿ ಕೊಂಡರು. ಈ ಮೂಲಕ ಒಟ್ಟು 20 ವಿಶ್ವ ಚಾಂಪಿಯನ್ಷಿಪ್ ಗಳನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.
ಯಾಂಗುನ್ (ಪಿಟಿಐ): ಭಾರತದ ಪಂಕಜ್ ಅಡ್ವಾಣಿ ಸತತ ಮೂರನೇ ಬಾರಿ ಐಬಿಎಸ್ಎಫ್ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿ ಕೊಂಡರು. ಈ ಮೂಲಕ ಒಟ್ಟು 20 ವಿಶ್ವ ಚಾಂಪಿಯನ್ಷಿಪ್ ಗಳನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.
ಬೆಂಗಳೂರಿನ ಅಡ್ವಾಣಿ,ನವೆಂಬರ್ 15 ರ ಗುರುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮ್ಯಾನ್ಮಾರ್ನ ನೇ ತ್ವೇ ವೂ ಅವರನ್ನು ಮಣಿಸಿದರು. ಮ್ಯಾನ್ಮಾರ್ನ ಆಟಗಾರನೊಬ್ಬ ವಿಶ್ವ ಚಾಂಪಿಯನ್ಷಿಪ್ನ ಫೈನಲ್ ಸುತ್ತು ಪ್ರವೇಶಿಸಿದ್ದು ಇದೇ ಮೊದಲು. ಸೆಮಿಫೈನಲ್ನಲ್ಲಿ ನೇ ತ್ವೇ ವೂ 5–2ರಿಂದ ಮೈಕ್ ರಸೆಲ್ ಅವರನ್ನು ಸೋಲಿಸಿದ್ದರು.
ಸ್ಕೋರ್ ವಿವರ: ಫೈನಲ್: ಪಂಕಜ್ ಅಡ್ವಾಣಿಗೆ ನೇ ತ್ವೇ ವಿರುದ್ಧ 6–2ರಿಂದ ಗೆಲುವು (150–21, 0–151, 151–0, 4–151, 151–11, 150–81, 151–109, 151–0). ಸೆಮಿಫೈನಲ್: ಪಂಕಜ್ ಅಡ್ವಾಣಿಗೆ ಡೇವಿಡ್ ಕಾಸಿಯರ್ ಎದುರು 5–0ಯಿಂದ ಜಯ (150–73, 152–17, 152–8, 151–4, 157–86).