ಐನ್‌ಸ್ಟೀನ್ ಸಾಪೇಕ್ಷತಾ ಸಿದ್ಧಾಂತಕ್ಕೆ ಸಡ್ಡು ಹೊಡೆದಿದ್ದ ಗಣಿತಜ್ಞ “ವಶಿಷ್ಠ ನಾರಾಯಣ್ ಸಿಂಗ್” ನಿಧನ

0
12

ವಿಶ್ವ ಕಂಡ ಅಪರೂಪದ ಭೌತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿದ್ದ ಖ್ಯಾತ ಗಣಿತಜ್ಞ ವಶಿಷ್ಠ ನಾರಾಯಣ್ ಸಿಂಗ್(74) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವೆಂಬರ್ 14 ರ ಗುರುವಾರ ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು.

ಪಟ್ನಾ (ಪಿಟಿಐ): ವಿಶ್ವ ಕಂಡ ಅಪರೂಪದ ಭೌತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿದ್ದ ಖ್ಯಾತ ಗಣಿತಜ್ಞ  ವಶಿಷ್ಠ ನಾರಾಯಣ್ ಸಿಂಗ್(74)  ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವೆಂಬರ್ 14 ರ ಗುರುವಾರ ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. 

ಏಪ್ರಿಲ್ 2, 1942 ರಂದು ಜನಿಸಿದ್ದ ವಶಿಷ್ಠ ನಾರಾಯಣ್ ಸಿಂಗ್, ಕಳೆದ 40 ವರ್ಷಗಳಿಂದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವಸಿಷ್ಠ ನಾರಾಯಣ್ ಸಿಂಗ್ ಅವಿಭಜಿತ ಬಿಹಾರದ ನೇತರ್ಹಾಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ವಸಿಷ್ಠ, ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ಮತ್ತು ಕೋಲ್ಕತ್ತದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕ್ಯಾಲಿಫೋರ್ನಿಯಾ ವಿ.ವಿಯಿಯಲ್ಲಿ 1969 ರಲ್ಲಿ ಸೈಕಲ್ ವೆಕ್ಟರ್ ಬಾಹ್ಯಾಕಾಶ ಸಿದ್ಧಾಂತದ ಕುರಿತು ವಸಿಷ್ಠ ನಾರಾಯಣ್ ಸಿಂಗ್ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದರು.