ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಮರಕ್ಕೆ ಮುಹೂರ್ತ ಫಿಕ್ಸ್‌: ಡಿ.11 ಫಲಿತಾಂಶ

0
630

ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಂತಾಗಿರುವ ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ಛತ್ತೀಸ್‌ಗಡ್, ತೆಲಂಗಾಣ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಅಕ್ಟೋಬರ್ 6 ರ ಶನಿವಾರ ಪ್ರಕಟಿಸಿದೆ.

ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಂತಾಗಿರುವ ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ಛತ್ತೀಸ್‌ಗಡ್, ತೆಲಂಗಾಣ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಅಕ್ಟೋಬರ್ 6 ರ ಶನಿವಾರ ಪ್ರಕಟಿಸಿದೆ. 
ಛತ್ತೀಸ್‌ಗಢದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, ನವೆಂಬರ್. 12 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ನವೆಂಬರ್. 12 ರಂದು ಚುನಾವಣೆ ನಡೆಯಲಿದೆ. ನವೆಂಬರ್. 20 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. 

ಮಧ್ಯ ಪ್ರದೇಶ ಮತ್ತು ಮಿಝೋರಾಂನಲ್ಲಿ ಒಂದೇ ಹಂತದಲ್ಲಿ ನವೆಂಬರ್. 28 ರಂದು ಮತದಾನ ನಡೆಯಲಿದೆ. ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಡಿಸೆಂಬರ್. 7 ರಂದು ಚುನಾವಣೆ ನಡೆಯುತ್ತದೆ.  ಡಿಸೆಂಬರ್. 11ಕ್ಕೆ ಎಲ್ಲ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ. 
ನವೆಂಬರ್. 3 ರಂದು ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 

ಮುಖ್ಯ ಚುನಾವಣಾಧಿಕಾರಿ ಒ ಪಿ ರಾವತ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಡಿಸೆಂಬರ್. 15ರ ಮೊದಲು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಡ್‌ನಲ್ಲಿ ಚುನಾವಣಾ ನೀತಿಸಂಹಿತೆ ಅಕ್ಟೋಬರ್ 6 ರ ಶನಿವಾರದಿಂದಲೇ ಜಾರಿಗೆ ಬರಲಿದೆ. 

ಜತೆಗೆ ಚುನಾವಣೆಗೆ ಸಿದ್ಧತೆ ಕೂಡ ಆರಂಭವಾಗಲಿದ್ದು, ಭದ್ರತೆ ಮತ್ತು ಸುರಕ್ಷತೆ ಕುರಿತಾಗಿ ಎಲ್ಲ ರಾಜ್ಯಗಳ ಸರಕಾರ ಮತ್ತು ಪೊಲೀಸ್ ಇಲಾಖೆ ಜತೆಗೆ ಅಲ್ಲಿನ ಚುನಾವಣಾ ಆಯೋಗ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ. 

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ನ ಸೂಚನೆ ಮತ್ತು ನಿಯಮ ಪಾಲಿಸಬೇಕು. ನೀತಿ ಸಂಹಿತೆ ಪಾಲನೆಯ ಜತೆಗೆ, ಆಸ್ತಿ ವಿವರ, ಕ್ರಿಮಿನಲ್ ಹಿನ್ನೆಲೆ ಘೋಷಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ 28 ಲಕ್ಷ ರೂ. ಎಂದು ಆಯೋಗ ಪ್ರಕಟಿಸಿದೆ. ಡಿಸೆಂಬರ್. 15ರೊಳಗೆ ನಾಲ್ಕು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.