ಐಟಿಬಿಪಿ ಸಿಬ್ಬಂದಿಗೆ ಉಡುಗೊರೆ

0
66

: ಭಾರತ- ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ)ನ 90,000 ಯೋಧರಿಗೆ ಸರ್ಕಾರ ಹೊಸ ಕೊಡುಗೆ ನೀಡಿದ್ದು, ಯೋಧರ ಜನ್ಮದಿನದಂದು ಅರ್ಧದಿನ ರಜೆ, ಕೇಕ್ ಮತ್ತು ಹೂಗುಚ್ಛದ ಉಡುಗೊರೆ ನೀಡುವುದಾಗಿ ತಿಳಿಸಿದೆ.

ನವದೆಹಲಿ: ಭಾರತ- ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ)ನ 90,000 ಯೋಧರಿಗೆ ಸರ್ಕಾರ ಹೊಸ ಕೊಡುಗೆ ನೀಡಿದ್ದು, ಯೋಧರ ಜನ್ಮದಿನದಂದು ಅರ್ಧದಿನ ರಜೆ, ಕೇಕ್ ಮತ್ತು ಹೂಗುಚ್ಛದ ಉಡುಗೊರೆ ನೀಡುವುದಾಗಿ ತಿಳಿಸಿದೆ. ಮನೆಯಿಂದ ದೂರವಿರುವ ಯೋಧರು, ಜನ್ಮದಿನದಂದು ಕುಟುಂಬದವರನ್ನು ನೆನೆದು ದುಃಖಿತರಾಗುತ್ತಾರೆ. ಇದನ್ನು ತಪ್ಪಿಸಲು ಜನ್ಮದಿನ ಆಚರಿಸಿಕೊಳ್ಳುವ ಯೋಧರ ಹೆಸರನ್ನು ಸೂಚನಾ ಫಲಕದಲ್ಲಿ ಮೊದಲೆ ಹಾಕಿ ಅವರನ್ನು ಅಭಿನಂದಿಸಿ ಖುಷಿ ಪಡಿಸಬೇಕು ಎಂದು ಐಟಿಬಿಪಿ ಆದೇಶ ತಿಳಿಸಿದೆ-ಏಜೆನ್ಸೀಸ್