ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಒಮನ್‌ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ : ಸಿಂಗಲ್ಸ್‌ನಲ್ಲಿ ಸತ್ಯನ್‌ಗೆ ಕಂಚು

0
264

ಭಾರತದ ಜಿ.ಸತ್ಯನ್‌ ಅವರು ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಒಮನ್‌ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಮಸ್ಕತ್‌ (ಪಿಟಿಐ):ಭಾರತದ ಜಿ.ಸತ್ಯನ್‌ ಅವರು ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಒಮನ್‌ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಮಾರ್ಚ್ 24 ರ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸತ್ಯನ್‌ 8–11, 11–7, 9–11, 11–9, 9–11, 11–9, 10–12 ರಲ್ಲಿ ಸ್ವೀಡನ್‌ನ ಮಥಿಯಾಸ್‌ ಫ್ಲಾಕ್‌ ಎದುರು ಪರಾಭವಗೊಂಡರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಫ್ಲಾಕ್‌ ಮೊದಲ ಗೇಮ್‌ನಲ್ಲಿ ಮಿಂಚಿನ ಆಟ ಆಡಿದರು. ಆರಂಭಿಕ ನಿರಾಸೆಯಿಂದ ಸತ್ಯನ್‌ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದ ಅವರು 1–1 ಸಮಬಲ ಮಾಡಿಕೊಂಡರು.

ಮೂರನೇ ಗೇಮ್‌ನಲ್ಲಿ ಫ್ಲಾಕ್‌ ಗೆದ್ದರೆ, ನಾಲ್ಕನೇ ಗೇಮ್‌ ಅನ್ನು ಸತ್ಯನ್‌ ಕೈವಶಮಾಡಿಕೊಂಡರು. ನಂತರದ ಎರಡು ಗೇಮ್‌ಗಳಲ್ಲೂ ಉಭಯ ಆಟಗಾರರು ತಲಾ ಒಂದರಲ್ಲಿ ಗೆದ್ದರು. ಹೀಗಾಗಿ 3–3 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಏಳನೇ ಗೇಮ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಸತ್ಯನ್‌ ಮಿಂಚಿನ ಆಟ ಆಡಿ ಗೆಲುವಿನ ಭರವಸೆ ಮೂಡಿ ಸಿದ್ದರು. ರೋಚಕ ಘಟ್ಟದಲ್ಲಿ ಒತ್ತಡಕ್ಕೆ ಒಳಗಾದಂತೆ ಕಂಡ ಭಾರತದ ಆಟಗಾರ ಎದುರಾಳಿಗೆ ಎರಡು ಪಾಯಿಂಟ್ಸ್‌ ಬಿಟ್ಟುಕೊಟ್ಟು ನಿರಾಸೆ ಕಂಡರು.