ಐಎಸ್‍ಎಸ್‍ಎಫ್ ವಿಶ್ವ ಕಪ್: ಚಿನ್ನ ಗೆದ್ದ ಜೀತು ರೈ, ಹೀನಾ ಸಿಧು

0
12

ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‍ ಎಸ್‍ ಎಫ್ ವಿಶ್ವ ಕಪ್‍ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂದದ ಸ್ಪರ್ಧೆಯಲ್ಲಿ ಭಾರತದ ಜೀತು ರೈ ಮತ್ತು ಹೀನಾ ಸಿಧು ಚಿನ್ನದ ಪದಕ ಗೆದ್ದಿದ್ದಾರೆ.

ವಿಶ್ವ ಕಪ್ ನ ಮೊದಲ ದಿನದ ಸ್ಫರ್ಧೆಯಲ್ಲಿ ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಜೀತು ಮತ್ತು ಕಾಮನ್‍ವೆಲ್ತ್ ಗೇಮ್ಸ್ ನ ಬಂಗಾರ ಪದಕ ವಿಜೇತೆ ಹೀನಾ ಈ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
 
ಈ ಜೋಡಿ ಇದೀಗ ಮಿಶ್ರ ತಂಡದಲ್ಲಿ ಆಡಿ ಯಶಸ್ಸು ಕಾಣುತ್ತಿರುವುದು ಇದು ಮೂರನೇ ಬಾರಿಯಾಗಿದೆ.
 
ಇದೇ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಚೀನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿವೆ. ಇದರೊಡನೆ ಜೋಡಿ ಮುಂದಿನ 2020ರ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದೆ.