ಐಎಸ್‌ಎಸ್‌ಎಫ್‌ ಶೂಟಿಂಗ್ ಟೂರ್ನಿ : ಸ್ವರ್ಣಕ್ಕೆ ಗುರಿಯಿಟ್ಟ

0
18

ಭಾರತದ ಅಪೂರ್ವಿ ಚಾಂಡೆಲಾ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಈ ವರ್ಷದ 3ನೇ ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ಪಿಸ್ತೂಲ್‌ ಹಂತದ ಮಹಿಳೆಯರ 10ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ.

ಹೊಸದಿಲ್ಲಿ: ಭಾರತದ ಅಪೂರ್ವಿ ಚಾಂಡೆಲಾ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಈ ವರ್ಷದ 3ನೇ ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ಪಿಸ್ತೂಲ್‌ ಹಂತದ ಮಹಿಳೆಯರ 10ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ.

ಮೇ 26 ರ ಭಾನುವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಜೈಪುರ ಶೂಟರ್‌ ಅಪೂರ್ವಿ 251 ಅಂಕ ಕಲೆಹಾಕಿ ಮೊದಲ ಸ್ಥಾನ ಗಳಿಸಿದರೆ, ಚೀನಾದ ವಾಂಗ್‌ ಲುಯಾಯೊ 250.8 ಅಂಕ ಸಂಪಾದಿಸಿ ಬೆಳ್ಳಿ ಗೆದ್ದರು. 229.4 ಅಂಕ ಗಳಿಸಿದ ಚೀನಾ ಶೂಟರ್‌ದ ಕ್ಸು ಹಾಂಗ್‌ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆಯ ಚಿನ್ನ ಗೆದ್ದ ಬಳಿಕ ಅಪೂರ್ವಿಗೆ ಒಲಿದ ಎರಡನೇ ಸ್ವರ್ಣ ಇದಾಗಿದೆ. 
 
2012 ರಲ್ಲಿ, ಚಾಂಡೆಲಾ ಅವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ನವ ದೆಹಲಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು, 2014 ರಲ್ಲಿ ಅವರು ಹೇಗ್ ನಲ್ಲಿನಡೆದ ಇಂಟರ್ ಶೂಟ್ ಚಾಂಪಿಯನ್ ಷಿಪ್ ನಲ್ಲಿ  ನಾಲ್ಕು ಪದಕಗಳನ್ನು ಗೆದ್ದರು, ಇದರಲ್ಲಿ ಎರಡು ವೈಯಕ್ತಿಕ ಮತ್ತು ಎರಡು ತಂಡದ ಪದಕಗಳು.
 
# ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ISSF) ಸ್ಥಾಪನೆ : 1907
 
# ISSF ನ ಅಧ್ಯಕ್ಷರು : ವ್ಲಾಡಿಮಿರ್ ಲಿಸ್ಟಿನ್
 
॑# ISSF ನ ಕೇಂದ್ರ ಕಚೇರಿ : ಮ್ಯೂನಿಚ್ ಜರ್ಮನಿ