ಐಎಲ್‌ಆ್ಯಂಡ್‌ಎಫ್‌ಎಸ್‌ ಖಾತೆ ‘ಎನ್‌ಪಿಎ’ ಪರಿಗಣನೆ:ಆರ್‌ಬಿಐ

0
157

ಸಾಲದ ಸುಳಿಗೆ ಸಿಲುಕಿರುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಐಎಲ್‌ಆ್ಯಂಡ್‌ಎಫ್‌ಎಸ್‌) ಖಾತೆಗಳನ್ನು ಬ್ಯಾಂಕ್‌ಗಳು ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ನವದೆಹಲಿ (ಪಿಟಿಐ): ಸಾಲದ ಸುಳಿಗೆ ಸಿಲುಕಿರುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಐಎಲ್‌ಆ್ಯಂಡ್‌ಎಫ್‌ಎಸ್‌) ಖಾತೆಗಳನ್ನು ಬ್ಯಾಂಕ್‌ಗಳು ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ತೊಂಬತ್ತು ದಿನಗಳಲ್ಲಿ ಸಾಲ ಮರುಪಾವತಿಯ ಕಂತು ಪಾವತಿಸದ ಯಾವುದೇ ಸಾಲವನ್ನು  ‘ಎನ್‌ಪಿಎ’ ಎಂದು ವಿಂಗಡಿಸುವುದು ಬ್ಯಾಂಕ್‌ಗಳ ಹೊಣೆಗಾರಿಕೆಯಾಗಿದೆ. ಈ ಪ್ರಕ್ರಿಯೆಯನ್ನು ಪ್ರತಿಯೊಂದು ಬ್ಯಾಂಕ್‌ ಕಡ್ಡಾಯವಾಗಿ ಅನುಸರಿಸಬೇಕು ಎಂದು ಆರ್‌ಬಿಐ, ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಗಮನಕ್ಕೆ ತಂದಿದೆ.

ನ್ಯಾಯಸಮ್ಮತ ಲೆಕ್ಕಪತ್ರಕ್ಕೆ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯ ನೈಜ ಚಿತ್ರಣ ಇರಬೇಕಾಗುತ್ತದೆ. ಇದರಿಂದ 
‘ಎನ್‌ಪಿಎ’ಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಸಿಗುತ್ತದೆ ಎಂದು ಹಿರಿಯ ವಕೀಲ ಗೋಪಾಲ್‌ ಜೈನ್‌ ಆರ್‌ಬಿಐ ಪರವಾಗಿ ವಾದ ಮಂಡಿಸಿದ್ದಾರೆ.

‘ಈ ಪ್ರಕ್ರಿಯೆಯು ಪಾರದರ್ಶಕವಾಗಿರಲಿದ್ದು, ನ್ಯಾಯೋಚಿತ ಲೆಕ್ಕಪತ್ರ ತಪಾಸಣೆ ಒಳಗೊಂಡಿರಲಿದೆ. ಇದರಿಂದ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಲಾರದು. ಎಲ್ಲ ಬ್ಯಾಂಕ್‌ಗಳಿಗೆ ಸಮಾನ ನೀತಿ ಅನುಸರಿಸುವುದು ಕೇಂದ್ರೀಯ ಬ್ಯಾಂಕ್‌ನ ಹೊಣೆಯಾಗಿದೆ’ ಎಂದೂ ಜೈನ್‌ ಹೇಳಿದ್ದಾರೆ.