ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಖ್ಯಾತ ಆರ್ಥಿಕ ತಜ್ಞ ಸುರ್ಜೀತ್. ಎಸ್.ಭಲ್ಲಾ ನೇಮಕ

0
19

ಖ್ಯಾತ ಆರ್ಥಿಕ ತಜ್ಞ ಸುರ್ಜೀತ್. ಎಸ್.ಭಲ್ಲಾ ಅವರನ್ನು ಅಂತರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಅಕ್ಟೋಬರ್ 1 ರ ಮಂಗಳವಾರ ನೇಮಿಸಲಾಗಿದೆ.

ನವದೆಹಲಿ: ಖ್ಯಾತ ಆರ್ಥಿಕ ತಜ್ಞ ಸುರ್ಜೀತ್. ಎಸ್.ಭಲ್ಲಾ ಅವರನ್ನು ಅಂತರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಮಂಗಳವಾರ ನೇಮಿಸಲಾಗಿದೆ.

ಐಎಂಎಫ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಡೆಪ್ಯೂಟಿ ಗವರ್ನರ್ ಸುಬೀರ್ ಗೋಕರ್ಣ ಅವರು ಜುಲೈ 30 ರಂದು ಅಮೆರಿಕದಲ್ಲಿ ನಿಧನರಾಗಿದ್ದರಿಂದ ಈ ಹುದ್ದೆ ತೆರವಾಗಿತ್ತು.

ಪ್ರಧಾನಿ ಅಧ್ಯಕ್ಷತೆಯ ನೇಮಕಾತಿ ಸಮಿತಿ 71 ವರ್ಷದ ಭಲ್ಲಾ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿಸಲು ಅನುಮೋದನೆ ನೀಡಿದೆ.

ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯತ್ವಕ್ಕೆ ಭಲ್ಲಾ ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜೀನಾಮೆ ನೀಡಿದ್ದರು.