“ಐಎಂಎಫ್‌” ನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಭಾರತ ಸಂಜಾತೆ “ಗೀತಾ ಗೋಪಿನಾಥ್‌” ನೇಮಕ

0
937

ಭಾರತ ಸಂಜಾತೆ ಗೀತಾ ಗೋಪಿನಾಥ್‌ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.

ನವದೆಹಲಿ (ಪಿಟಿಐ): ಭಾರತ ಸಂಜಾತೆ ಗೀತಾ ಗೋಪಿನಾಥ್‌ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ  ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.

ಈ ಹುದ್ದೆಗೆ ಏರಿದ ಭಾರತದ ಎರಡನೆ ಅರ್ಥಶಾಸ್ತ್ರಜ್ಞೆ ಇವರಾಗಿದ್ದಾರೆ. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಇದಕ್ಕೂ ಮೊದಲು ಈ ಹುದ್ದೆ ಅಲಂಕರಿಸಿದ್ದರು.

ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಅವರು, ಗೀತಾ ಅವರನ್ನು ಸಂಶೋಧನಾ ಇಲಾಖೆಯ ನಿರ್ದೇಶಕರನ್ನಾಗಿಯೂ ನೇಮಕ ಮಾಡಿದ್ದಾರೆ.

ಗೀತಾ ಅವರು, ಈ ಹುದ್ದೆಯಿಂದ ನಿವೃತ್ತರಾಗಲಿರುವ ಮೌರೈಸ್‌ ಆಬ್ಸ್ಟ್‌ಫೆಲ್ಡ್‌ ಅವರ ಉತ್ತರಾಧಿಕಾರಿಯಾಗಲಿದ್ದಾರೆ.  ಸದ್ಯಕ್ಕೆ ಗೀತಾ ಅವರು ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.