ಐಆರ್​ಸಿಟಿಸಿ : ವಿಮಾನ ಟಿಕೆಟ್ ಖರೀದಿಗೆ 50 ಲಕ್ಷ ರೂ. ವಿಮೆ ಉಚಿತ!

0
445

ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾಪೋರೇಷನ್​ನ (ಐಆರ್​ಸಿಟಿಸಿ) ಪೋರ್ಟಲ್ ಮೂಲಕ ವಿಮಾನದ ಟಿಕೆಟ್ ಖರೀದಿಸುವವರಿಗೆ 50 ಲಕ್ಷ ರೂ. ಉಚಿತ ವಿಮೆ ಸೌಲಭ್ಯ ದೊರೆಯಲಿದೆ. 2019ರ ಫೆಬ್ರವರಿಯಿಂದ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ನವದೆಹಲಿ: ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾಪೋರೇಷನ್​ನ (ಐಆರ್​ಸಿಟಿಸಿ) ಪೋರ್ಟಲ್ ಮೂಲಕ ವಿಮಾನದ ಟಿಕೆಟ್ ಖರೀದಿಸುವವರಿಗೆ 50 ಲಕ್ಷ ರೂ. ಉಚಿತ ವಿಮೆ ಸೌಲಭ್ಯ ದೊರೆಯಲಿದೆ. 2019ರ ಫೆಬ್ರವರಿಯಿಂದ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಐಆರ್​ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ಮಾಲ್ ಗುರುವಾರ ಈ ವಿಷಯ ತಿಳಿಸಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿನ ಪ್ರಯಾಣಕ್ಕಾಗಿ ಯಾವುದೇ ವರ್ಗದ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿದವರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಹೇಳಿದ್ದಾರೆ.

ಶುಲ್ಕ ಪಾವತಿಸಬೇಕು: ಐಆರ್​ಸಿಟಿಸಿ ಹೊರತುಪಡಿಸಿ ಬೇರಾವುದೇ ಖಾಸಗಿ ಪೋರ್ಟಲ್ ಮೂಲಕ ವಿಮಾನ ಟಿಕೆಟ್ ಕಾಯ್ದಿರಿಸಬಹುದು. ಆದರೆ, ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಐಆರ್​ಸಿಟಿಸಿ ಪೋರ್ಟಲ್​ನಲ್ಲಿ ಮಾತ್ರ ಈ ಸೌಲಭ್ಯ ಉಚಿತವಾಗಿ ದೊರೆಯಲಿದೆ.

ಆರು ಸಾವಿರ ಟಿಕೆಟ್ ಖರೀದಿ

ಐಆರ್​ಸಿಟಿಸಿ ಪೋರ್ಟಲ್ ಮೂಲಕ ಪ್ರತಿದಿನ 5- 6 ಸಾವಿರ ವಿಮಾನದ ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ. ಅನ್ಯ ಪೋರ್ಟಲ್​ಗಳಲ್ಲಿ ಟಿಕೆಟ್ ಕಾಯ್ದಿರಿಸಲು ಪ್ರತಿ ಟಿಕೆಟ್​ಗೆ 200 ರೂ. ಸಂಸ್ಕರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಟಿಕೆಟ್ ರದ್ದುಗೊಳಿಸಿದರೂ ನಿರ್ದಿಷ್ಟ ಮೊತ್ತವನ್ನು ಹಿಡಿದುಕೊಂಡು, ಬಾಕಿ ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ, ಐಆರ್​ಸಿಟಿಸಿ ಪೋರ್ಟಲ್ ಮೂಲಕ ಟಿಕೆಟ್​ಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್​ಗೆ 50 ರೂ. ಸಂಸ್ಕರಣಾ ಶುಲ್ಕ ಪಡೆಯಲಾಗುತ್ತದೆ. ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸಿದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ.