ಏಷ್ಯಾ ಸ್ನೂಕರ್‌ ಟೂರ್‌: ಪಂಕಜ್‌ಗೆ ಪ್ರಶಸ್ತಿ

0
232

ಭಾರತ ಪಂಕಜ್ ಅಡ್ವಾನಿ ಅವರು ಚೀನಾದ ಜಿನಾನ್‌ನಲ್ಲಿ ನಡೆದ ಏಷ್ಯಾ ಸ್ನೂಕರ್‌ ಟೂರ್‌ನ ಎರಡನೇ ಲೆಗ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಗೆದ್ದ ಅವರು ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.

ನವದೆಹಲಿ (ಪಿಟಿಐ): ಭಾರತ ಪಂಕಜ್ ಅಡ್ವಾನಿ ಅವರು ಚೀನಾದ ಜಿನಾನ್‌ನಲ್ಲಿ ನಡೆದ ಏಷ್ಯಾ ಸ್ನೂಕರ್‌ ಟೂರ್‌ನ ಎರಡನೇ ಲೆಗ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಗೆದ್ದ ಅವರು ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.

19 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್‌ ಅಕ್ಟೋಬರ್ 31 ರ ಬುಧವಾರ ನಡೆದ ಫೈನಲ್ ಸುತ್ತಿನಲ್ಲಿ ಚೀನಾದ ಜೂ ರೇತಿ ಅವರನ್ನು 6–1ರಿಂದ ಮಣಿಸಿದರು. ಈ ಮೂಲಕ ಏಷ್ಯನ್ ಸ್ನೂಕರ್ ಟೂರ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂದೆನಿಸಿಕೊಂಡರು. ಟೂರ್‌ನ ಪ್ರತಿ ಪಂದ್ಯದಲ್ಲೂ ಅವರು ಏಕಪಕ್ಷೀಯ ಗೆಲುವು ಸಾಧಿಸಿದ್ದರು.

ಬುಧವಾರದ ಹಣಾಹಣಿಯ ಮೊದಲ ಎರಡು ಫ್ರೇಮ್‌ಗಳನ್ನು ಅಡ್ವಾನಿ ಸುಲಭವಾಗಿ ಗೆದ್ದರು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ರೇತಿ ತಿರುಗೇಟು ನೀಡಿ ಮೂರನೇ ಫ್ರೇಮ್ ಅನ್ನು ತಮ್ಮದಾಗಿಸಿಕೊಂಡರು. ನಂತರ ಅಡ್ವಾನಿ ಅವರ ಚಾಕಚಕ್ಯತೆಗೆ ಎದುರಾಳಿ ದಂಗಾದರು. ಮುಂದಿನ ನಾಲ್ಕು ಫ್ರೇಮ್‌ಗಳನ್ನು ಭಾರತದ ಆಟಗಾರ ಸುಲಭವಾಗಿ ಗೆದ್ದರು.