ಏಷ್ಯಾ ಶೂಟಿಂಗ್ ಚಾಂಪಿಯನ್‌ಷಿಪ್‌ :ಬೆಳ್ಳಿ ಗಳಿಸಿದ ದಿವ್ಯಾಂಶು

0
267

ಭಾರತದ ದಿವ್ಯಾಂಶು ಸಿಂಗ್‌ ಪನ್ವರ್‌ ಮತ್ತು ಇಳವೆನ್ನಿಲ ವಾಳವರಿವನ್‌ ಅವರು ಏಷ್ಯಾ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಜೂನಿಯರ್‌ ಬಾಲಕರ 10 ಮೀಟರ್ಸ್ ಏರ್‌ ರೈಫಲ್‌ನಲ್ಲಿ ದಿವ್ಯಾಂಶು 251.4 ಸ್ಕೋರ್‌ಗಳ ಸಾಧನೆ ಮಾಡಿದರು. ಜೂನಿಯರ್ ವಿಭಾಗದ ವಿಶ್ವ ದಾಖಲೆ ಮತ್ತು ಏಷ್ಯಾ ದಾಖಲೆ ಮಾಡಿದ ಚೀನಾದ ವಾಂಗ್‌ ಯೂಫೆಂಗ್‌ ಚಿನ್ನ ಗೆದ್ದರು. ಅವರು 252.3 ಸ್ಕೋರ್ ಮಾಡಿದರು.

ಕುವೈತ್‌ (ಪಿಟಿಐ): ಭಾರತದ ದಿವ್ಯಾಂಶು ಸಿಂಗ್‌ ಪನ್ವರ್‌ ಮತ್ತು ಇಳವೆನ್ನಿಲ ವಾಳವರಿವನ್‌ ಅವರು ಏಷ್ಯಾ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಜೂನಿಯರ್‌ ಬಾಲಕರ 10 ಮೀಟರ್ಸ್ ಏರ್‌ ರೈಫಲ್‌ನಲ್ಲಿ ದಿವ್ಯಾಂಶು 251.4 ಸ್ಕೋರ್‌ಗಳ ಸಾಧನೆ ಮಾಡಿದರು. ಜೂನಿಯರ್ ವಿಭಾಗದ ವಿಶ್ವ ದಾಖಲೆ ಮತ್ತು ಏಷ್ಯಾ ದಾಖಲೆ ಮಾಡಿದ ಚೀನಾದ ವಾಂಗ್‌ ಯೂಫೆಂಗ್‌ ಚಿನ್ನ ಗೆದ್ದರು. ಅವರು 252.3 ಸ್ಕೋರ್ ಮಾಡಿದರು.

ಜೂನಿಯರ್‌ ಬಾಲಕಿಯರ 10 ಮೀಟರ್ಸ್ ಏರ್ ರೈಫಲ್ಸ್‌ನಲ್ಲಿ ಇಳವೆನ್ನಿಲ 227.9 ಸ್ಕೋರ್ ಮಾಡಿದರು. ಚೀನಾದ ಶೀ ಮಾಂಗ್ಯೊ ಚಿನ್ನ ಗೆದ್ದರೆ ಅದೇ ದೇಶದ ಕ್ಸು ಹಾಂಗ್‌ ಬೆಳ್ಳಿ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಶ್ರೇಯಲ್ ಅಗರವಾಲ್ ಮತ್ತು ಮೇಹುಲಿ ಘೋಷ್‌ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನ ಗಳಿಸಿದರು.