“ಏಷ್ಯಾ ಕಪ್ ಸೈಕ್ಲಿಂಗ್” ವೆಂಕಪ್ಪ ಕೆಂಗಲಗುತ್ತಿಗೆ ಕಂಚು

0
384

ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಗಳಿಸಿದ ಭಾರತ, ಟ್ರ್ಯಾಕ್ ಏಷ್ಯಾಕಪ್‌ ಸೈಕ್ಲಿಂಗ್‌ನ ಮೊದಲ ದಿನ ಪಾರಮ್ಯ ಮೆರೆದಿದೆ. ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ ಕಂಚಿನ ಪದಕ ಗಳಿಸಿ ಮಿಂಚಿದ್ದಾರೆ.

ನವದೆಹಲಿ: ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಗಳಿಸಿದ ಭಾರತ, ಟ್ರ್ಯಾಕ್ ಏಷ್ಯಾಕಪ್‌ ಸೈಕ್ಲಿಂಗ್‌ನ ಮೊದಲ ದಿನ ಪಾರಮ್ಯ ಮೆರೆದಿದೆ. ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ ಕಂಚಿನ ಪದಕ ಗಳಿಸಿ ಮಿಂಚಿದ್ದಾರೆ.

ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದ ವೆಲೊಡ್ರೋಮ್‌ ನಲ್ಲಿ  ಭಾರತ ಸೈಕ್ಲಿಂಗ್ ಫೆಡರೇಷನ್‌ ಆಯೋಜಿಸಿರುವ ಸ್ಪರ್ಧೆಯಲ್ಲಿ ಬಿಲಾಲ್‌ ಅಹಮ್ಮದ್‌ ದರ್‌ ಅವರು ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟರು. ಜೂನಿಯರ್‌ ವಿಭಾಗದ 15 ಮೀಟರ್ಸ್ ಪಾಯಿಂಟ್ ರೇಸ್‌ನಲ್ಲಿ 19 ಪಾಯಿಂಟ್‌ ಗಳಿಸಿದ ಅವರು ಬೆಳ್ಳಿ ಗೆದ್ದರು. ಇದೇ ಸ್ಪರ್ಧೆಯಲ್ಲಿ ಸಾಯಿ ನಿಕಾ (ಸಾಯಿ ನ್ಯಾಷನಲ್ ಸೈಕ್ಲಿಂಗ್ ಅಕಾಡೆಮಿ) ಪರವಾಗಿ ಕಣಕ್ಕೆ ಇಳಿದ ವೆಂಕಪ್ಪ ಕಂಚು ಗೆದ್ದರು. ಕಜಕಸ್ತಾನದ ನಲ್ ಪೆಕೋಟಿನ್‌ (22 ಪಾಯಿಂಟ್‌) ಚಿನ್ನ ಗಳಿಸಿದರು.

 ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟವರು ಮಯೂರಿ ಲೂತೆ. ಜೂನಿಯರ್ ವಿಭಾಗದ 500 ಮೀಟರ್ಸ್‌ ರೇಸ್‌ನಲ್ಲಿ ಅವರು ಈ ಸಾಧನೆ ಮಾಡಿದರು. 37.583 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಥಾಯ್ಲೆಂಡ್‌ನ ಕನ್ಯಾರತ್ ಹಕೋವಿ ಅವರನ್ನು ಹಿಂದಿಕ್ಕಿದರು. ಕಜಕಸ್ತಾನದ ಅಲ್ಯೋನ ಕಂಚು ಗಳಿಸಿದರು.

ಜೂನಿಯರ್ ವಿಭಾಗದ ಸ್ಪ್ರಿಂಟ್‌ನಲ್ಲಿ ಈಸೊ, ಅಭಿಷೇಕ್‌ ಮತ್ತು ಜೆಮ್ಶ್‌ ಸಿಂಗ್‌ ಒಳಗೊಂಡ ಭಾರತ ತಂಡ ಕಜಕಸ್ತಾನವನ್ನು ಹಿಂದಿಕ್ಕಿ ಚಿನ್ನವನ್ನು ಬಗಲಿಗೆ ಹಾಕಿಕೊಂಡಿತು. ಭಾರತ 46.804 ಸೆಕೆಂಡುಗಳಲ್ಲಿ ಗುರಿ ತಲುಪಿತು.

ಎಲೀಟ್‌ ಮಹಿಳೆಯರ 500 ಮೀಟರ್ಸ್‌ ಟೈಮ್ ಟ್ರಯಲ್ಸ್‌ನಲ್ಲಿ ಭಾರತದ ಎಂ.ಸೊನಾಲಿ ಚಾನು (37.140 ಸೆಕೆಂಡು) ಕಂಚು ಗಳಿಸಿದರು.