ಏಷ್ಯಾ ಏರ್‌ಗನ್ ಶೂಟಿಂಗ್ : ಭಾರತದ ದಿವ್ಯಾಂಶ್, ಇಳವೆನ್ನಿಲಾಗೆ ಚಿನ್ನ

0
287

ಭಾರತದ ಶೂಟಿಂಗ್ ತಂಡವು ತೈಪೆಯಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ ನಲ್ಲಿ ಮಾರ್ಚ್ 31 ರ ಭಾನುವಾರವೂ ಚಿನ್ನದ ಬೇಟೆ ಮುಂದುವರಿಸಿತು.

ನವದೆಹಲಿ (ಪಿಟಿಐ): ಭಾರತದ ಶೂಟಿಂಗ್ ತಂಡವು ತೈಪೆಯಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನಲ್ಲಿ ಮಾರ್ಚ್ 31 ರ ಭಾನುವಾರವೂ ಚಿನ್ನದ ಬೇಟೆ ಮುಂದುವರಿಸಿತು.

ಸ್ಪರ್ಧೆಯಲ್ಲಿ ಇದುವರೆಗೆ ಒಟ್ಟು 12 ಚಿನ್ನದ ಪದಕಗಳನ್ನು ತಂಡವು ತನ್ನದಾ ಗಿಸಿಕೊಂಡಿದೆ. ಅಲ್ಲದೇ ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೂ ತಂಡಕ್ಕೆ ಒಲಿದಿವೆ.

ಐದನೇ ದಿನವಾದ ಭಾನುವಾರ ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಇಳವೆನ್ನಿಲಾ ವಾಳರಿವನ್ ಅವರು ಕ್ರಮವಾಗಿ 10 ಮೀಟರ್ಸ್‌ ಏರ್‌ ರೈಫಲ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು.

ಪುರುಷರ ವಿಭಾಗದಲ್ಲಿ  ದಿವ್ಯಾಂಶ್ ಅವರು 249.7 ಪಾಯಿಂಟ್ಸ್‌ ಗಳಿಸಿದರು.  ಕೊರಿಯಾದ ಕಿಮ್ ಬೆಳ್ಳಿ ಮತ್ತು ಶಿನ್ ಅವರು ಕಂಚು ಗೆದ್ದರು.

ಮಹಿಳೆಯರ ಫೈನಲ್‌ನಲ್ಲಿ ಇಳವೆನ್ನಿಲಾ ಅವರು 250.5 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ತೈಪೆಯ ಲಿನ್ ಯಿಂಗ್ ಶಿನ್ ಅವರು ಬೆಳ್ಳಿ ಪದಕ ಗೆದ್ದರು. ಕೊರಿಯಾದ ಪಾರ್ಕ್ ಸನ್‌ಮಿನ್ 229.1 ಪಾಯಿಂಟ್ಸ್‌ ಗಳಿಸಿ ಕಂಚು ಪಡೆದರು.

ಇಳವೆನಿಲ್, ಅಪೂರ್ವಿ ಮತ್ತು ಮೇಘನಾ ಅವರನ್ನೊಳಗೊಂಡ ಭಾರತ ತಂಡವು ಮಹಿಳೆಯರ ತಂಡ ವಿಭಾಗದಲ್ಲಿ 1878.6 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ತೈಪೆ ತಂಡವು 1872.5 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.