ಏಷ್ಯಾಡ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದ ಪೂವಮ್ಮಗೆ ಕರ್ನಾಟಕ ರಾಜ್ಯ ಸರಕಾರದಿಂದ 40 ಲಕ್ಷ ರೂ. ಪುರಸ್ಕಾರ

0
563

ಏಷ್ಯಾಡ್‌ನಲ್ಲಿ ಚಿನ್ನ (ಮಹಿಳೆಯರ ರಿಲೇ) ಹಾಗೂ ಬೆಳ್ಳಿ ಪದಕ (ಮಿಶ್ರ ರಿಲೇ) ಗೆದ್ದ ಮಂಗಳೂರಿನ ಎಂ.ಆರ್‌. ಪೂವಮ್ಮ ಅವರಿಗೆ ರಾಜ್ಯ ಸರಕಾರದ ವತಿಯಿಂದ 40 ಲಕ್ಷ ರೂ. (ಚಿನ್ನಕ್ಕೆ 15 + ಬೆಳ್ಳಿಗೆ 15) ಪುರಸ್ಕಾರ ನೀಡಲಾಯಿತು. ಸಿಎಂ ಕುಮಾರಸ್ವಾಮಿ ಅವರು ಸೆಪ್ಟೆಂಬರ್ 7 ರ ಶುಕ್ರವಾರ ಮಂಗಳೂರಿನ ದ.ಕ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚೆಕ್‌ ಹಸ್ತಾಂತರಿಸಿದರು.

ಮಂಗಳೂರು: ಏಷ್ಯಾಡ್‌ನಲ್ಲಿ ಚಿನ್ನ (ಮಹಿಳೆಯರ ರಿಲೇ) ಹಾಗೂ ಬೆಳ್ಳಿ ಪದಕ (ಮಿಶ್ರ ರಿಲೇ) ಗೆದ್ದ ಮಂಗಳೂರಿನ ಎಂ.ಆರ್‌. ಪೂವಮ್ಮ ಅವರಿಗೆ ರಾಜ್ಯ ಸರಕಾರದ ವತಿಯಿಂದ 40 ಲಕ್ಷ ರೂ. (ಚಿನ್ನಕ್ಕೆ 15 + ಬೆಳ್ಳಿಗೆ 15) ಪುರಸ್ಕಾರ ನೀಡಲಾಯಿತು. ಸಿಎಂ ಕುಮಾರಸ್ವಾಮಿ ಅವರು ಸೆಪ್ಟೆಂಬರ್ 7 ರ ಶುಕ್ರವಾರ ಮಂಗಳೂರಿನ ದ.ಕ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚೆಕ್‌ ಹಸ್ತಾಂತರಿಸಿದರು. 
ನಂತರ, ನಿವೇಶನ ನೀಡುವ ಭರವಸೆಯನ್ನೂ ನೀಡಿದರು. ನಂತರ ಮಾತನಾಡಿದ ಪೂವಮ್ಮ, ”ಮುಖ್ಯಮಂತ್ರಿಗಳ ಸ್ಪಂದನೆ ಮತ್ತು ಸ್ಫೂರ್ತಿಯುತ ಮಾತಿನಿಂದ ಸಂತಸವಾಗಿದೆ. ಅಧಿಕಾರಿಗಳ ಜತೆ ಚರ್ಚಿಸಿ ಗರಿಷ್ಠ ಮೊತ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ರೀತಿಯ ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಿದಂತಾಗಿದೆ ಎಂದರು.