ಏಷ್ಯಾಡ್​ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಸಿಂಧು!

0
615

ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಜಕಾರ್ತ: ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಐತಿಹಾಸಿಕ ಚಿನ್ನದ ಪದಕ ಬೇಟೆಗಿಳಿದಿದ್ದ ಭಾರತದ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು, ವಿಶ್ವದ ನಂಬರ್​ ಒನ್​ ಆಟಗಾರ್ತಿ ಚೈನೀಸ್​ ತೆಪೆಯ ತೈ ಜು ಯಿಂಗ್ ಎದುರು 13-21, 16-21 ನೇರ ಸೆಟ್​ಗಳ ಮೂಲಕ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು

ನಿನ್ನೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಅಕಾನೆ ಯೆಮಗುಚಿ ವಿರುದ್ಧ 21-17, 15-21, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಏಷ್ಯಾಡ್​ ಫೈನಲ್ಸ್​ಗೆ ಐತಿಹಾಸಿಕ ಪ್ರವೇಶ ಪಡೆದಿದ್ದರು.

ಸಿಂಧು ಸಾಧನೆಗೆ ದೇಶವೇ ಮೆಚ್ಚುಗೆಯ ಸುರಿಮಳೆ ಸುರಿಸಿದ್ದು, ಕ್ರೀಡಾ ಸಚಿವ ರಾಜ್ಯವರ್ಧನ್​ ರಾಥೋಡ್​ ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಏಷ್ಯಾಡ್ ಬ್ಯಾಡ್ಮಿಂಟನ್​ನ ಮಹಿಳಾ ಸಿಂಗಲ್ಸ್​ನಲ್ಲಿ ಭಾರತ ಈವರೆಗೂ ಪದಕ ಸಾಧನೆ ಮಾಡಿರಲಿಲ್ಲ. ಆದರೆ, ಹಾಲಿ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ್ದು, ಸಿಂಧು ಮೂಲಕ ಐತಿಹಾಸಿಕ ಸ್ವರ್ಣವನ್ನು ನಿರೀಕ್ಷಿಸಿತ್ತು. 1982ರ ಏಷ್ಯಾಡ್​ನಲ್ಲಿ ಸಯ್ಯದ್ ಮೋದಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಬಂದಿರಲಿಲ್ಲ. (ಏಜೆನ್ಸೀಸ್​)