ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌: ಒಟ್ಟು 25 ಪದಕ ಗೆದ್ದ ಭಾರತದ ಶೂಟರ್‌ಗಳು

0
325

ಕೊನೆಯ ದಿನವೂ ಆಧಿಪತ್ಯ ಮುಂದುವರಿಸಿದ ಭಾರತದ ಶೂಟರ್‌ಗಳು ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 25 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೀನಾ ತೈಪೆಯ ಟಯಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ ಏಪ್ರೀಲ್ 1 ರ ಸೋಮವಾರ ಐದು ಚಿನ್ನ ಗೆದ್ದಿತು. ಇದರೊಂದಿಗೆ ತಂಡದ ಒಟ್ಟು ಸಾಧನೆ 16 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕ ತನ್ನದಾಗಿಸಿಕೊಂಡಿತು.

ನವದೆಹಲಿ (ಪಿಟಿಐ): ಕೊನೆಯ ದಿನವೂ ಆಧಿಪತ್ಯ ಮುಂದುವರಿಸಿದ ಭಾರತದ ಶೂಟರ್‌ಗಳು ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 25 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೀನಾ ತೈಪೆಯ ಟಯಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ ಏಪ್ರೀಲ್ 1 ರ ಸೋಮವಾರ ಐದು ಚಿನ್ನ ಗೆದ್ದಿತು. ಇದರೊಂದಿಗೆ ತಂಡದ ಒಟ್ಟು ಸಾಧನೆ 16 ಚಿನ್ನ, 5 ಬೆಳ್ಳಿ ಮತ್ತು ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಯಶ್‌ ವರ್ಧನ್‌ ಮತ್ತು ಶ್ರೇಯಾ ಅಗರವಾಲ್‌ ಸೋಮವಾರ ಅಪೂರ್ವ ಸಾಮರ್ಥ್ಯ ತೋರಿದರು. ಜೂನಿಯರ್‌ ಪುರುಷರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಯಶ್ ವರ್ಧನ್‌ ಚಿನ್ನ ಗೆದ್ದರು. ನಂತರ ಕೇವಲ್‌ ಪ್ರಜಾಪತಿ ಮತ್ತು ಐಶ್ವರ್ಯಾ ತೋಮರ್ ಜೊತೆಗೂಡಿ ತಂಡ ವಿಭಾಗಗಳಲ್ಲಿ ಚಿನ್ನ ಗಳಿಸಿದರು.

ಜೂನಿಯರ್ ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಶ್ರೇಯಾ ಚಿನ್ನಕ್ಕೆ ಗುರಿ ಇರಿಸಿದರು. ನಂತರ ಮೇಹುಲಿ ಘೋಷ್‌ 
ಮತ್ತು ಕವಿ ಚಕ್ರವರ್ತಿ ಜೊತೆಗೆ ತಂಡ ವಿಭಾಗಗಳಲ್ಲೂ ಮೊದಲಿಗರಾದರು.