ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ :ಭಾರತದ “ಸ್ವಪ್ನಾ ಬರ್ಮನ್‌”ಗೆ ಬೆಳ್ಳಿ

0
288

ಭಾರತದ ಸ್ವಪ್ನಾ ಬರ್ಮನ್‌, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೆಪ್ಟಾಥ್ಲಾನ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಮಂಗಳವಾರ ಸಂಜೆ ಈ ವಿಭಾಗದ ಕೊನೆಯ ಸ್ಪರ್ಧೆ ಮುಕ್ತಾಯಗೊಂಡಾಗ ಸ್ವಪ್ನಾ ಒಟ್ಟು 5993 ಪಾಯಿಂಟ್ ಕಲೆ ಹಾಕಿದರು.

ದೋಹಾ (ಪಿಟಿಐ): ಭಾರತದ ಸ್ವಪ್ನಾ ಬರ್ಮನ್‌, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೆಪ್ಟಾಥ್ಲಾನ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಏಪ್ರೀಲ್ 23 ರ ಮಂಗಳವಾರ ಸಂಜೆ ಈ ವಿಭಾಗದ ಕೊನೆಯ ಸ್ಪರ್ಧೆ ಮುಕ್ತಾಯಗೊಂಡಾಗ ಸ್ವಪ್ನಾ ಒಟ್ಟು 5993 ಪಾಯಿಂಟ್ ಕಲೆ ಹಾಕಿದರು.

ಪದಕ ಪಡೆದವರು : 6198 ಪಾಯಿಂಟ್‌ ಗಳಿಸಿದ ಉಜ್ಬೆಕಿಸ್ತಾನದ ಎಕಟೇರಿನಾ ವಾರ್ನಿನಾ ಚಿನ್ನದ ಪದಕ ತಮ್ಮದಾಗಿಸಿ ಕೊಂಡರು. ಕಂಚಿನ ಪದಕ ಚೀನಾದ ಟ್ವಿಂಗ್ಲಿಂಗ್ ವಾಂಗ್ ಪಾಲಾಯಿತು. ಅವರು 5289 ಪಾಯಿಂಟ್ ಬಗಲಿಗೆ ಹಾಕಿಕೊಂಡಿದ್ದರು. ಸ್ಪರ್ಧೆಯಲ್ಲಿ ಭಾರತದ ಪೂರ್ಣಿಮಾ ಹೆಂಬ್ರಮ್ ಕೂಡ ಇದ್ದರು. ಅವರು 5528 ಪಾಯಿಂಟ್ ಗಳಿಸಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಭಾರತದ ಪಾರುಲ್ ಚೌಧರಿ ಐದನೆಯವರಾದರು. 10 ನಿಮಿಷ 3.43 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ವೈಯಕ್ತಿಕ ಸಾಧನೆ ಯನ್ನು ಉತ್ತಮಪಡಿಸಿಕೊಂಡರು.

ಜಿನ್ಸನ್‌ಗೆ ಆಘಾತ: ಪುರುಷರ 1500 ಮೀಟರ್ಸ್ ಓಟದಲ್ಲಿ ಸ್ಪರ್ಧಿಸಬೇಕಾಗಿದ್ದ ಭಾರತದ ಜಿನ್ಸನ್ ಜಾನ್ಸನ್‌ ಗಾಯದ ಸಮಸ್ಯೆಯಿಂದಾಗಿ ಕಣಕ್ಕೆ ಇಳಿಯದಿರಲು ನಿರ್ಧರಿಸಿದ್ದಾರೆ.

ಸೋಮವಾರ 800 ಮೀಟರ್ಸ್ ಓಟದಲ್ಲೂ ಅವರು ಪಾಲ್ಗೊಂಡಿರಲಿಲ್ಲ.