ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ : ಸೌರಭ್‌ ಚೌಧರಿಗೆ ಬೆಳ್ಳಿ

0
7

ಭಾರತದ ಯುವ ಶೂಟರ್‌ ಸೌರಭ್‌ ಚೌಧರಿ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಗುರಿಯಿಟ್ಟಿದ್ದಾರೆ. ಸೋಮವಾರ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅವರು ಎರಡನೇ ಸ್ಥಾನ ಗಳಿಸಿದರು.

ದೋಹಾ (ಪಿಟಿಐ): ಭಾರತದ ಯುವ ಶೂಟರ್‌ ಸೌರಭ್‌ ಚೌಧರಿ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಗುರಿಯಿಟ್ಟಿದ್ದಾರೆ. ನವೆಂಬರ್ 11 ರ ಸೋಮವಾರ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅವರು ಎರಡನೇ ಸ್ಥಾನ ಗಳಿಸಿದರು.

ವಿಶ್ವಕಪ್‌ ಹಾಗೂ ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ 17 ವರ್ಷದ ಸೌರಭ್‌ 244.5 ಪಾಯಿಂಟ್ಸ್‌ ಗಳಿಸಿದರೆ, ಉತ್ತರ ಕೊರಿಯಾದ ಕಿಮ್‌ ಸಾಂಗ್‌ ಗುಕ್‌ (246.5 ಪಾಯಿಂಟ್ಸ್) ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. 221.8 ಪಾಯಿಂಟ್ಸ್ ಕಲೆಹಾಕಿದ ಇರಾನ್‌ನ ಫಾರೂಕಿ ಜಾವೇದ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಚೌಧರಿ ಹಾಗೂ ಅಭಿಷೇಕ್‌ ವರ್ಮಾ ಇಬ್ಬರೂ ಅರ್ಹತಾ ಸುತ್ತಿನಲ್ಲಿ ತಲಾ 583 ಪಾಯಿಂಟ್ಸ್‌ ಗಳಿಸಿ ಕ್ರಮವಾಗಿ ಆರು ಹಾಗೂ ಏಳನೆಯವರಾಗಿ ಫೈನಲ್ಸ್‌ ತಲುಪಿದ್ದರು. ಆದರೆ ಫೈನಲ್ಸ್‌ನಲ್ಲಿ 181.5 ಪಾಯಿಂಟ್ಸ್‌ ಗಳಿಸಿದ ವರ್ಮಾಗೆ ಐದನೇ ಸ್ಥಾನ ಪಡೆಯಲಷ್ಟೇ ಸಾಧ್ಯವಾಯಿತು.

17 ವರ್ಷದ ಸೌರಭ್‌ 244.5 ಪಾಯಿಂಟ್ಸ್‌ ಗಳಿಸಿದರೆ, ಉತ್ತರ ಕೊರಿಯಾದ ಕಿಮ್‌ ಸಾಂಗ್‌ ಗುಕ್‌ (246.5 ಪಾಯಿಂಟ್ಸ್) ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು.