ಏಷ್ಯನ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗೆ ಚಂಡೀಗಢ ಆತಿಥ್ಯ

0
270

ಏಪ್ರಿಲ್‌ 27ರಿಂದ ಮೇ 3ರವರೆಗೆ ನಡೆಯಲಿರುವ 18ನೇ ಏಷ್ಯನ್‌ ಬಿಲಿಯರ್ಡ್ಸ್ ಹಾಗೂ 20 ವರ್ಷದೊಳಗಿನವರ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ ಮತ್ತು 3ನೇ ಮಹಿಳೆಯರ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ಗೆ ಚಂಡೀಗಢ ಆತಿಥ್ಯ ವಹಿಸಲಿದೆ ಎಂದು ಪಂಜಾಬ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಸಂಸ್ಥೆ (ಪಿಬಿಎಸ್‌ಎ) ಏಪ್ರೀಲ್ 18 ರ ಗುರುವಾರ ತಿಳಿಸಿದೆ.

ಚಂಡೀಗಢ : ಏಪ್ರಿಲ್‌ 27ರಿಂದ ಮೇ 3ರವರೆಗೆ ನಡೆಯಲಿರುವ 18ನೇ ಏಷ್ಯನ್‌ ಬಿಲಿಯರ್ಡ್ಸ್ ಹಾಗೂ 20 ವರ್ಷದೊಳಗಿನವರ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ ಮತ್ತು 3ನೇ ಮಹಿಳೆಯರ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ಗೆ ಚಂಡೀಗಢ ಆತಿಥ್ಯ ವಹಿಸಲಿದೆ ಎಂದು ಪಂಜಾಬ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಸಂಸ್ಥೆ (ಪಿಬಿಎಸ್‌ಎ)  ಏಪ್ರೀಲ್ 18 ರ ಗುರುವಾರ ತಿಳಿಸಿದೆ. 

”ಸುಮಾರು 15 ಏಷ್ಯಾ ರಾಷ್ಟ್ರಗಳ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಈ ಪ್ರಾಂತ್ಯದ ಜನರು ವಿಶ್ವದರ್ಜೆಯ ಆಟಗಾರರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಟೂರ್ನಿಯು ಈ ಭಾಗದ ಉತ್ಸಾಹಿ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಪಟುಗಳಿಗೆ ಉತ್ತೇಜನ ನೀಡುವ ವಿಶ್ವಾಸವಿದೆ,” ಎಂದು ಪಿಬಿಎಸ್‌ಎ ಅಧ್ಯಕ್ಷ ಡಿ.ಎಸ್‌.ಬೈನ್ಸ್‌ ಹೇಳಿದ್ದಾರೆ. ಆತಿಥೇಯ ಭಾರತ, ಚೀನಾ, ಥಾಯ್ಲೆಂಡ್‌, ಸಿಂಗಾಪುರ, ಹಾಂಕಾಂಗ್‌, ಕತಾರ್‌, ಸಿರಿಯಾ, ಕೊರಿಯಾ, ಜಪಾನ್‌, ಶ್ರೀಲಂಕಾ, ಮ್ಯಾನ್ಮಾರ್‌, ಇರಾನ್‌ ಮತ್ತು ಇತರ ರಾಷ್ಟ್ರಗಳ ಆಟಗಾರರು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 

ಹಾಲಿ ಏಷ್ಯನ್‌ ಲೇಡಿಸ್‌ ಸ್ನೂಕರ್‌ ಚಾಂಪಿಯನ್‌ ಅಮೀ ಕಮಾನಿ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತರಾದ ಧ್ರುವ್‌ ಸಿತ್ವಾಲಾ, ವಿದ್ಯಾ ಪಿಳ್ಳೈ ಹಾಗೂ ಹಾಲಿ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ ಶ್ರೀಕೃಷ್ಣ ಅವರನ್ನೊಳಗೊಂಡ ಭಾರತ ತಂಡದ ಸವಾಲನ್ನು ಹಾಲಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ ಕನ್ನಡಿಗ ಪಂಕಜ್‌ ಆಡ್ವಾಣಿ ಮುನ್ನಡೆಸಲಿದ್ದಾರೆ. ಏಷ್ಯನ್‌ ಕಾನ್‌ಫೆಡರೇಷನ್‌ ಆಫ್‌ ಬಿಲಿಯರ್ಡ್ಸ್ ಸ್ಪೋರ್ಟ್ಸ್ ಮತ್ತು ಭಾರತದ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಒಕ್ಕೂಟದ ವತಿಯಿಂದ ಈ ಚಾಂಪಿಯನ್‌ಷಿಪ್‌ ಆಯೋಜಿಸಲಾಗುತ್ತಿದೆ.