ಏಷ್ಯನ್‌ ಗೇಮ್ಸ್‌ಗೆ 804 ಸದಸ್ಯರ ನಿಯೋಗ ಸಜ್ಜು

0
16

ಇಂಡೊನೇಷ್ಯಾದ ಎರಡು ನಗರಗಳಲ್ಲಿ ಇದೇ 18ರಿಂದ ನಡೆಯಲಿರುವ 18ನೇ ಏಷ್ಯಾ ಕ್ರೀಡಾಕೂಟಕ್ಕೆ 804 ಸದಸ್ಯರ ಭಾರತದ ನಿಯೋಗಕ್ಕೆ ಕೇಂದ್ರ ಸರಕಾರ ಆಗಸ್ಟ್ 11 ರ ಶನಿವಾರ ಒಪ್ಪಿಗೆ ಸೂಚಿಸಿದೆ. ಇನ್ನು ಇಂಡೊನೇಷ್ಯಾಕ್ಕೆ ಪ್ರಯಾಣ ಬೆಳೆಸುವುದೊಂದೇ ಬಾಕಿ. 804 ಸದಸ್ಯರ ನಿಯೋಗದ ಪೈಕಿ 572 ಅಥ್ಲೀಟ್‌ಗಳು, 183 ಅಧಿಕಾರಿಗಳು, 119 ತರಬೇತುದಾರರು, 21 ವೈದ್ಯರು ಮತ್ತು ಫಿಸಿಯೊಥೆರಪಿಸ್ಟ್‌ಗಳು ಹಾಗೂ 43 ಇನ್ನಿತರ ಅಧಿಕಾರಿಗಳು ಇದ್ದಾರೆ.

ಹೊಸದಿಲ್ಲಿ: ಇಂಡೊನೇಷ್ಯಾದ ಎರಡು ನಗರಗಳಲ್ಲಿ ಇದೇ ಆಗಸ್ಟ್  18ರಿಂದ ನಡೆಯಲಿರುವ 18ನೇ ಏಷ್ಯಾ ಕ್ರೀಡಾಕೂಟಕ್ಕೆ 804 ಸದಸ್ಯರ ಭಾರತದ ನಿಯೋಗಕ್ಕೆ ಕೇಂದ್ರ ಸರಕಾರ ಆಗಸ್ಟ್ 11 ರ  ಶನಿವಾರ ಒಪ್ಪಿಗೆ ಸೂಚಿಸಿದೆ. ಇನ್ನು ಇಂಡೊನೇಷ್ಯಾಕ್ಕೆ ಪ್ರಯಾಣ ಬೆಳೆಸುವುದೊಂದೇ ಬಾಕಿ. 804 ಸದಸ್ಯರ ನಿಯೋಗದ ಪೈಕಿ 572 ಅಥ್ಲೀಟ್‌ಗಳು, 183 ಅಧಿಕಾರಿಗಳು, 119 ತರಬೇತುದಾರರು, 21 ವೈದ್ಯರು ಮತ್ತು ಫಿಸಿಯೊಥೆರಪಿಸ್ಟ್‌ಗಳು ಹಾಗೂ 43 ಇನ್ನಿತರ ಅಧಿಕಾರಿಗಳು ಇದ್ದಾರೆ. 

572 ಅಥ್ಲೀಟ್‌ಗಳು 36 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ಪೈಕಿ 312 ಪುರುಷರ ಸ್ಪರ್ಧಿಗಳಾದರೆ 260 ಮಹಿಳಾ ಸ್ಪರ್ಧಿಗಳಾಗಿದ್ದಾರೆ. ಭಾರತೀಯ ಬಳಗವನ್ನು ಹೆಸರಿಸುವ ಮತ್ತು ಆ ಪಟ್ಟಿಗೆ ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸುವ ಸುದೀರ್ಘ ಪ್ರಕ್ರಿಯೆ ಸರಕಾರ ಮತ್ತು ಐಒಎ ನಡುವೆ ಹೆಚ್ಚೇನೂ ಸಂಘರ್ಷ ನಡೆಯದೇ ಮುಕ್ತಾಯಗೊಂಡಿದೆ. 804 ಸದಸ್ಯರ ಪಟ್ಟಿಯನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಸೋಮವಾರವೇ ಸರಕಾರಕ್ಕೆ ಸಲ್ಲಿಸಿತ್ತು. 

’49 ಮಂದಿಯ ಖರ್ಚು ನಮ್ಮದಲ್ಲ’ 

ಭಾರತೀಯ ಒಲಿಂಪಿಕ್‌ ಸಂಸ್ಥೆ ನೀಡಿರುವ 804 ಸದಸ್ಯರ ಪಟ್ಟಿಗೆ ಕೇಂದ್ರ ಕ್ರೀಡಾ ಸಚಿವಾಲಯವೇನೋ ಒಪ್ಪಿಗೆ ಸೂಚಿಸಿದೆ. ಆದರೆ, ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ನೀಡಿದ 804 ಸದಸ್ಯರ ಪಟ್ಟಿಯಲ್ಲಿ 755 ಸದಸ್ಯರ ಖರ್ಚು ವೆಚ್ಚವನ್ನಷ್ಟೇ ತಾನು ನೋಡಿಕೊಳ್ಳುವುದಾಗಿ ಸಚಿವಾಲಯ ತಿಳಿಸಿದೆ. ಹೀಗಾಗಿ ಉಳಿದ 49 ಮಂದಿಯ ಖರ್ಚನ್ನು ಆಯಾ ಕ್ರೀಡಾ ಸಂಸ್ಥೆಗಳೇ ವಹಿಸಿಕೊಳ್ಳಬೇಕಾಗುತ್ತದೆ. ಇವರಲ್ಲಿ 26 ವ್ಯವಸ್ಥಾಪಕರು, 3 ಕೋಚ್‌ಗಳು ಹಾಗೂ 20 ಇತರ ಅಧಿಕಾರಿಗಳು.