ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಚಿತ್ರಾ ಕೊರಳಿಗೆ ಚಿನ್ನದ ಪದಕ

0
384

ಭಾರತದ ದೂರ ಅಂತರದ ಓಟಗಾರ್ತಿ ಪಿ.ಯು.ಚಿತ್ರಾ 1500 ಮೀಟರ್‌ ಓಟದಲ್ಲಿ ಏಪ್ರೀಲ್ 24 ರ ಬುಧವಾರ ಮತ್ತೊಮ್ಮೆ ಚಿನ್ನದ ಪದಕ ಜಯಿಸುವುದರೊಂದಿಗೆ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 4ನೇ ಹಾಗೂ ಕೊನೆಯ ದಿನ ಭಾರತದ ಪದಕದ ಖಾತೆಗೆ ಒಟ್ಟು 3 ಚಿನ್ನದ ಪದಕಗಳು ಸೇರ್ಪಡೆಯಾದಂತಾಗಿದೆ.

ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ದೋಹಾ : ಭಾರತದ ದೂರ ಅಂತರದ ಓಟಗಾರ್ತಿ ಪಿ.ಯು.ಚಿತ್ರಾ 1500 ಮೀಟರ್‌ ಓಟದಲ್ಲಿ ಏಪ್ರೀಲ್ 24 ರ ಬುಧವಾರ ಮತ್ತೊಮ್ಮೆ ಚಿನ್ನದ ಪದಕ ಜಯಿಸುವುದರೊಂದಿಗೆ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 4ನೇ ಹಾಗೂ ಕೊನೆಯ ದಿನ ಭಾರತದ ಪದಕದ ಖಾತೆಗೆ ಒಟ್ಟು 3 ಚಿನ್ನದ ಪದಕಗಳು ಸೇರ್ಪಡೆಯಾದಂತಾಗಿದೆ.

ಅಲ್ಲದೆ, ಪುರುಷರ 1500 ಮೀ. ಓಟದಲ್ಲಿ ಅಜಯ್‌ ಕುಮಾರ್‌ ಸರೋಜ್‌ ಮತ್ತು ಮಹಿಳೆಯರ 200 ಮೀ. ಓಟದಲ್ಲಿ ದುತೀ ಚಾಂದ್‌ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು. 

ಇಲ್ಲಿನ ಖಲೀಫಾ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ 1500 ಮೀಟರ್‌ ಓಟದ ಸ್ಪರ್ಧೆಯಲ್ಲಿ ಚಿತ್ರಾ 4 ನಿಮಿಷ, 14.56 ಸೆಕೆಂಡುಗಳಲ್ಲಿ ಓಟ ಮುಗಿಸಿ ಬಂಗಾರಿಯಾದರು. ಇದಕ್ಕೂ ಮೊದಲು 2017ರಲ್ಲಿ ಭುವನೇಶ್ವರದಲ್ಲಿ ನಡೆದ ಆವೃತ್ತಿಯಲ್ಲೂ (4:17.92 ಸೆ.) ಚಿತ್ರಾ ಚಿನ್ನ ಗೆದ್ದಿದ್ದರು.