ಏಷ್ನನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಷಿಪ್ : ಭಾರತದ ಸರಬ್ಜೋತ್‌, ಇಶಾಗೆ ಚಿನ್ನದ ಪದಕ

0
311

ಭಾರತದ ಸರಬ್ಜೋತ್ ಸಿಂಗ್ ಮತ್ತು ಇಶಾ ಸಿಂಗ್ ಅವರು 12ನೇ ಏಷ್ಯನ್ ಏರಗನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ನವದೆಹಲಿ(ಪಿಟಿಐ): ಭಾರತದ ಸರಬ್ಜೋತ್ ಸಿಂಗ್ ಮತ್ತು ಇಶಾ ಸಿಂಗ್ ಅವರು 12ನೇ ಏಷ್ಯನ್ ಏರಗನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ತೈಪೆಯ ತಾವೊಯುನ್‌ನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಶನಿವಾರ ಪುರುಷರ 10 ಮೀಟರ್ಸ್‌ ಏರ್‌ಪಿಸ್ತೂಲ್ ಜೂನಿಯರ್ ವಿಭಾಗದಲ್ಲಿ ಸರಬ್ಜೋತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.  ತಂಡ ವಿಭಾಗದಲ್ಲಿ ಸರಬ್ಜೋತ್ ಅವರು ಅರ್ಜುನ್ ಚೀಮಾ ಮತ್ತು ವಿಜಯವೀರ್ ಸಿಧು ಅವರೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಸರಬ್ಜೋತ್ ಅವರು 579 ಸ್ಕೋರ್ ದಾಖಲಿಸಿದರು. ಫೈನಲ್‌ನಲ್ಲಿ ಅವರು 237.8 ಪಾಯಿಂಟ್ಸ್‌ ಗಳಿಸಿ ಕೊರಿಯಾದ ಕಿಮ್ ವೂಜಾಂಗ್ ವಿರುದ್ಧ ಗೆದ್ದರು. ಕಿಮ್ ಅವರು 236.6 ಪಾಯಿಂಟ್ಸ್‌ ಗಳಿಸಿದರು.

ಭಾರತದ ವಿಜಯ್ ವೀರ್ ಅವರು ಕಂಚಿನ ಪದಕ ಪಡೆದರು. ಅವರು 217.5 ಸ್ಕೋರ್ ಗಳಿಸಿದರು. ಫೈನಲ್‌ನಲ್ಲಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಅರ್ಜುನ್ ಚೀಮಾ ನಾಲ್ಕನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಈಶಾ ಸಿಂಗ್‌  ಚಿನ್ನದ ಪದಕವನ್ನು  ಗೆದ್ದರು. ಅವರು ಅರ್ಹತಾ ಸುತ್ತಿನಲ್ಲಿ  576 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸದರು.

ಫೈನಲ್‌ನಲ್ಲಿ 240.1 ಪಾಯಿಂಟ್ಸ್‌ ಗಳಿಸಿ ಚಿನ್ನ ಗೆದ್ದರು. ಭಾರತದ ಹರ್ಷದಾ ನಿತಾವೆ ಮತ್ತು ದೇವಾಂಶಿ ಧಾಮಾ ಅವರು ಫೈನಲ್‌ಪ್ರವೇಸಿಸಿದರು.  ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನ ಪಡೆದರು.

ಭಾರತ ತಂಡವು ಇದುವರೆಗೆ ಈ ಸ್ಪರ್ಧೆಯಲ್ಲಿ ಎಂಟು ಚಿನ್ನದ ಪದಕ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ಇನ್ನೂ ಎರಡು ದಿನಗಳ ಸ್ಪರ್ಧೆ ಬಾಕಿ ಇವೆ.