ಏರ್ ಇಂಡಿಯಾ : ಕೊನೆಯ ಕ್ಷಣದಲ್ಲಿ ಟಿಕೆಟ್‌ ಖರೀದಿಗೆ ಶೇಕಡ 40ರಷ್ಟು ರಿಯಾಯಿತಿ

0
19

ಕೊನೆಯ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಲು ಪರದಾಡುವ ಏರ್ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರಕಿದೆ.
ಅನಿವಾರ್ಯ ಕಾರಣಗಳಿಂದ ವಿಮಾನ ಹೊರಡುವ 3 ಗಂಟೆ ಮೊದಲು ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇಕಡ 40ರಷ್ಟು ರಿಯಾಯಿತಿ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ.

ಮುಂಬಯಿ :  ಕೊನೆಯ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಲು ಪರದಾಡುವ ಏರ್ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರಕಿದೆ. ಅನಿವಾರ್ಯ ಕಾರಣಗಳಿಂದ ವಿಮಾನ ಹೊರಡುವ 3 ಗಂಟೆ ಮೊದಲು ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇಕಡ 40ರಷ್ಟು ರಿಯಾಯಿತಿ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ.

ಅಂತಿಮ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಲು ಮುಂದಾಗುವ ಪ್ರಯಾಣಿಕರಿಗೆ ಏರ್ ಇಂಡಿಯಾದ ಈ ನಿರ್ಧಾರ ವರವಾಗಿ ಪರಿಣಮಿಸಲಿದೆ. 

ಈ ಡಿಸ್ಕೌಂಟ್‌ ದರದ ಟಿಕೆಟ್‌ಗಳನ್ನು ಏರ್‌ ಇಂಡಿಯಾದ ಎಲ್ಲ ಬುಕಿಂಗ್‌ ಕೌಂಟರ್‌ಗಳಲ್ಲಿ ಖರೀದಿಸಬಹುದು. ಎಐ ಆ್ಯಪ್‌, ಎಐ ವೆಬ್‌ಸೈಟ್‌ ಮತ್ತು ಟ್ರಾವೆಲ್‌ ಏಜೆಂಟ್‌ಗಳ ಮೂಲಕ ಪಡೆಯಬಹುದು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. 

ಈ ಅನುಕೂಲದಿಂದ ತುರ್ತು ಸಂದರ್ಭಗಳಲ್ಲಿ ವಿಮಾನ ಪ್ರಯಾಣದ ಅಗತ್ಯ ಇರುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.  ಕೊನೆಯ ಕ್ಷಣದಲ್ಲಿ ದುಬಾರಿ ಏರ್‌ ಟಿಕೆಟ್‌ ಕೊಳ್ಳುವುದು ತಪ್ಪುತ್ತದೆ. 

ಏರ್‌ ಇಂಡಿಯಾದ ಈ ಆಫರ್‌ ಮೇ 11 ರ ಶನಿವಾರದಿಂದ ಜಾರಿಯಾಗಲಿದೆ. ವಿಮಾನ ಹೊರಡಲು ಮೂರು ಗಂಟೆ ಉಳಿದಿರುವಾಗ ಈ ಭಾರಿ ಡಿಸ್ಕೌಂಟ್‌ ದರದ ಟಿಕೆಟ್‌ಗಳು ಸಿಗಲಿವೆ. ಸಾಮಾನ್ಯವಾಗಿ ಇಂಥ ಟಿಕೆಟ್‌ಗಳು ಮಾರಾಟ ಬೆಲೆಗಿಂತ 40 ಪರ್ಸೆಂಟ್‌ ದುಬಾರಿಯಾಗಿರುತ್ತವೆ. 

ಸಾಮಾನ್ಯವಾಗಿ ಕೊನೆಯ ಕ್ಷಣಗಳಲ್ಲಿ ಪ್ರಯಾಣಿಸುವವರು ತುರ್ತು ಸಂದರ್ಭ ಎದುರಿಸುತ್ತಿರುತ್ತಾರೆ. ಅಂಥ ಪ್ರಯಾಣಿಕರಿಗೆ ದುಬಾರಿ ದರ ಇದುವರೆಗೆ ತಲೆನೋವಾಗುತ್ತಿತ್ತು. ಆದರೆ ಈ ಆಫರ್‌ನಿಂದ ದರ ಅಗ್ಗವಾಗಲಿದೆ ಎಂದು ಏರ್‌ಲೈನ್‌ ವಕ್ತಾರರು ತಿಳಿಸಿದ್ದಾರೆ. 

ವೈಮಾನಿಕ ವಲಯದಲ್ಲಿ ಇದು ಅತ್ಯಂತ ಅಪರೂಪದ ಬೆಳವಣಿಗೆ ಎಂದು ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.